ಹುಬ್ಬಳ್ಳಿ: ದಯವಿಲ್ಲದ ಧರ್ಮ ಅದಾವುದಯ್ಯಾ.ದಯಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ. ದಯವೇ ಧರ್ಮದ ಮೂಲವಯ್ಯ ಎಂಬುವಂತ ಸದುದ್ದೇಶದಿಂದ ಹುಬ್ಬಳ್ಳಿಯಲ್ಲೊಂದು ಸಂಸ್ಥೆ ಪ್ರಾಣಿಗಳ ಉಳಿವಿಗಾಗಿ ಹೋರಾಟ ನಡೆಸುತ್ತಿದೆ.
ಪೀಪಲ್ ಫಾರ್ ಎನಿಮಲ್ಸ್ (ಪಿಎಫ್ಎ) ಹುಬ್ಬಳ್ಳಿ ಸಂಘಟನೆ ಪ್ರಾಣಿಗಳ ಉಳಿವಿಗಾಗಿ ಹೋರಾಟ ನಡೆಸುತ್ತಿದ್ದು,ಹು-ಧಾ ಮಹಾನಗರ ಪಾಲಿಕೆ ಬೀದಿ ದನಗಳನ್ನು ಹಾಗೂ ಬೀದಿ ಪ್ರಾಣಿಗಳ ಸಂರಕ್ಷಣೆಯ ಜೊತೆಗೆ ಅಪಘಾತದಲ್ಲಿ ತುತ್ತಾಗುತ್ತಿರುವ ಪ್ರಾಣಿಗಳ ಪ್ರಮಾಣಕ್ಕೆ ಕಡಿವಾಣ ಹಾಕುವ ಸದುದ್ದೇಶದಿಂದ ಈ ಸಂಘಟನೆ ಕಾರ್ಯ ನಿರ್ವಹಿಸುತ್ತಿದೆ.
ಅಲ್ಲದೇ ಬೀದಿ ನಾಯಿಗಳ ಸಂತಾನಹರಣ ಚಿಕಿತ್ಸೆ ಜೊತೆಗೆ ಬೀದಿ ಪ್ರಾಣಿಗಳ ಸಂರಕ್ಷಣೆಯಲ್ಲಿ ಸರ್ಕಾರದ ಇಲಾಖೆಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಪೀಪಲ್ ಫಾರ್ ಎನಿಮಲ್ಸ್ (ಪಿಎಫ್ಎ) ಹುಬ್ಬಳ್ಳಿ ಸಂಘಟನೆ ಹುಬ್ಬಳ್ಳಿಯಲ್ಲಿಂದು ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡು ಹು-ಧಾ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಯೊಂದು ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಆಡಳಿತ ಮಂಡಳಿಯವರು ಪ್ರಾಣಿಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು.ಪ್ರಾಣಿಗಳಿಗೆ ಪ್ರತ್ಯೇಕ ಅಂಬ್ಯುಲೆನ್ಸ್ ಸೇವೆಯನ್ನು ಶೀಘ್ರವಾಗಿ ಚಾಲನೆ ನೀಡಬೇಕು ಪ್ರಾಣಿ ಸಂರಕ್ಷಣೆಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಒತ್ತಾಯಿಸಿದರು.
Kshetra Samachara
30/01/2021 09:18 pm