ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ನಂಬಿಸಿ ಕರೆದುಕೊಂಡು ಬಂದು ಮೋಸ ಮಾಡಿದ ಗುತ್ತಿಗೆದಾರ

ಧಾರವಾಡ: ಕೈತುಂಬ ಸಂಬಳ ಕೊಡಿಸುತ್ತೇನೆ ಎಂದು ನಂಬಿಸಿ ಕೂಲಿಕಾರರನ್ನು ಕರೆದುಕೊಂಡು ಬಂದ ಗುತ್ತಿಗೆದಾರನೊಬ್ಬ ಆ ಕೂಲಿಕಾರರಿಂದ ಕೆಲಸ ಮಾಡಿಸಿಕೊಂಡು ವೇತನವನ್ನೂ ಕೊಡದೇ ಮೋಸ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು, ಸದ್ಯ ಆ ಕೂಲಿಕಾರರಿಗೆ ಧಾರವಾಡದ ಸಹನಾ ಗ್ರಾಮೀಣ ಹಾಗೂ ನಗರಾಭಿವೃದ್ಧಿ ಸಂಸ್ಥೆ ಆಶ್ರಯ ನೀಡಿದೆ.

ಈ ದೃಶ್ಯಗಳಲ್ಲಿ ನೀವು ನೋಡುತ್ತಿರುವ ಕೂಲಿಕಾರರು ಕರ್ನಾಟಕದವರಲ್ಲ. ಇವರು ಉತ್ತರ ಪ್ರದೇಶ ಮೂಲದವರು. ಇವರಿಗೆ ಪರಿಚಯಸ್ಥನಾದ ಗುತ್ತಿಗೆದಾರನೊಬ್ಬ ನಿಮಗೆ ಕೈತುಂಬ ಸಂಬಳ ಸಿಗುವ ಕೆಲಸ ಕೊಡಿಸುತ್ತೇನೆ ಎಂದು ಕರೆದುಕೊಂಡು ಬಂದು ಇವರಿಂದ ಗಾರೆ ಕೆಲಸ ಮಾಡಿಸಿಕೊಂಡು ವೇತನವನ್ನೂ ಕೊಡದೇ ಮೋಸ ಮಾಡಿದ್ದಾನೆ. ಇದು ಮೋಸ ಎಂದು ಗೊತ್ತಾದ ಕೂಡಲೇ ಈ ಕಾರ್ಮಿಕರು ನಡೆದುಕೊಂಡೇ ಹುಬ್ಬಳ್ಳಿ, ಧಾರವಾಡ ಬೈಪಾಸ್ ಮೂಲಕ ತಮ್ಮ ರಾಜ್ಯದತ್ತ ಹೋಗುತ್ತಿದ್ದರು. ಸಹನಾ ಸಂಸ್ಥೆಯವರು ಇವರನ್ನು ವಿಚಾರಣೆ ನಡೆಸಿದಾಗ ಸತ್ಯ ಘಟನೆ ಗೊತ್ತಾಗಿದೆ.

ಸದ್ಯ ಇವರಿಗೆ ಸಹನಾ ಸಂಸ್ಥೆ ಆಶ್ರಯ ನೀಡಿದ್ದು, ಧಾರವಾಡ ಜಿಲ್ಲಾಡಳಿತ ಈ ಕಾರ್ಮಿಕರು ಮರಳಿ ತಮ್ಮೂರಿಗೆ ಹೋಗಲು ವ್ಯವಸ್ಥೆ ಮಾಡಿ ಕೊಡಬೇಕು ಎಂದು ಸಂಸ್ಥೆಯ ಮುಖ್ಯಸ್ಥರು ಈ ಕಾರ್ಮಿಕರನ್ನು ಧಾರವಾಡದ ಜಿಲ್ಲಾಧಿಕಾರಿ ಕಚೇರಿಗೆ ಕರೆದುಕೊಂಡು ಬಂದಿದ್ದರು.

Edited By : Manjunath H D
Kshetra Samachara

Kshetra Samachara

28/01/2021 06:20 pm

Cinque Terre

85.91 K

Cinque Terre

3

ಸಂಬಂಧಿತ ಸುದ್ದಿ