ಎಸಿಬಿ ವಿಭಾಗದ ಎಸ್.ಪಿ ಬಿ.ಎಸ್.ನೇಮಗೌಡಗೆ ರಾಷ್ಟ್ರಪತಿ ಪದಕ
ಹುಬ್ಬಳ್ಳಿ: ಹು-ಧಾ ಮಹಾನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಡಿಸಿಪಿಯಾಗಿ ಸುಮಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ಎಸಿಬಿ ಎಸ್ ಪಿ ಯಾಗಿರುವ ಬಿ.ಎಸ್.ನೇಮಗೌಡ ಅವರು ರಾಷ್ಟ್ರಪತಿ ಪದಕಕ್ಕೆ ಭಾಜನರಾದರು.
ಹೌದು..ಜನವರಿ26 ರಂದು ನಡೆದ ಕಾರ್ಯಕ್ರಮದಲ್ಲಿ ಎಸಿಬಿ ವಿಭಾಗದ ಎಸ್.ಪಿ ಯಾಗಿರುವ ಬಿ.ಎಸ್.ನೇಮಗೌಡ ಅವರು ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಪದಕ ನೀಡಿ ಗೌರವಿಸಲಾಯಿತು.
ಹು-ಧಾ ಮಹಾನಗರ ಪೊಲೀಸ್ ಕಮೀಷನರೇಟ್ ನಲ್ಲಿ ಕೂಡ ಪೊಲೀಸ್ ಉಪ ಆಯುಕ್ತರಾಗಿ ಬಿ.ಎಸ್.ನೇಮಗೌಡ ಅವರು ಕಾರ್ಯನಿರ್ವಹಿಸಿ ಜನಮನ್ನಣೆ ಪಡೆದಿರುವ ಅಧಿಕಾರಿಯಾಗಿದ್ದರು ಎಂಬುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.