ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಆಸ್ತಿ ತೆರಿಗೆಯಲ್ಲಿ ಹೆಸರು ವರ್ಗಾವಣೆಗೆ ವಿಳಂಬ! ಪಾಲಿಕೆ ವಿರುದ್ಧ ಸಿಡಿದೆದ್ದ ಕುಟುಂಬಸ್ಥರು

ಹುಬ್ಬಳ್ಳಿ: ವಾರ್ಡ್ ನಂ 35 ರಲ್ಲಿ ಬರುವ ರಾಮಲಿಂಗೇಶ್ವರ ನಗರದ ನಿವಾಸಿಯಾದ, ವಿದ್ಯಾ ಮಂಜುನಾಥ ಜರತಾರಘರ ಅವರು, ಮನೆಯೊಂದನ್ನು ಖರೀದಿಸಿದ್ದರು. ಅದರಂತೆ ಆಸ್ತಿ ತೆರಿಗೆಯಲ್ಲಿ ಹೆಸರು ವರ್ಗಾವಣೆಗೆ 2017ರಲ್ಲಿ ಪಾಲಿಕೆಯ ವಲಯ ಕಚೇರಿ 7ರಲ್ಲಿ ಅರ್ಜಿ ಕೊಟ್ಟಿದ್ದರು. ಆದರೆ, ನಾಲ್ಕು ವರ್ಷವಾದರೂ ಇದುವರೆಗೆ ವರ್ಗಾವಣೆ ಮಾಡಿಕೊಟ್ಟಿಲ್ಲ ಎಂದು ಈಗ ಆ ಕುಟುಂಬಸ್ಥರು ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ...

ಸರ್ವೆ ನಂಬರ್ 6071609ರ ಪ್ಲಾಟ್ ನಂ. 963 ಪಿಐಡಿ ಸ್ವತ್ತಿನ ಗುರುತಿನ ಸಂಖ್ಯೆ, 35/4230ದ ಅನುಭೋಗಸ್ತರಾದ ಸುಮನಾ ಸುರೇಶ ಪೂಜಾರಿ ಅವರಿಂದ ವಿದ್ಯಾ ಅವರು ಮನೆ ಖರೀದಿ ಮಾಡಿದ್ದಾರೆ. ಆಸ್ತಿ ತೆರಿಗೆ ವರ್ಗಾವಣೆ ಶುಲ್ಕವನ್ನು ಭರಿಸಿ, ಅಗತ್ಯ ದಾಖಲೆ ಸಲ್ಲಿಸಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ.

ಕಳೆದ ವರ್ಷ ಸುರಿದ ಮಳೆಗೆ ಮನೆ ಕುಸಿದಿದ್ದು, ಮಹಿಳೆಗೆ ಹೊಸ ಮನೆ ಕಟ್ಟಲು ಸಾಧ್ಯವಾಗಿಲ್ಲ. ಇದೇ ನೆಪದಲ್ಲಿ ಅಧಿಕಾರಿಗಳು ವರ್ಗಾವಣೆ ಸಾಧ್ಯವಿಲ್ಲ ಹಾಗೂ ಆಸ್ತಿಯಲ್ಲಿ ನಿಮ್ಮ ಹೆಸರು ರದ್ದು ಮಾಡಿದ್ದೇವೆ ಎಂದು ಮಹಿಳೆಗೆ ನೋಟಿಸ್ ಕೊಟ್ಟಿದ್ದಾರೆ’ ಎಂದು ಸಂಬಂಧಿಸಿದ ವಕೀಲರು ಆರೋಪಿಸಿದರು...

ಇನ್ನು ಬಡ ಮಹಿಳೆಗೆ ಸಕಾಲದಲ್ಲಿ ಕೆಲಸ ಮಾಡಿಕೊಡದ ಅಧಿಕಾರಿಗಳು, ಈಗ ಪಿಐಡಿ ರದ್ದುಪಡಿಸಿರುವುದು ಬಹಳ‌ ನೊವುಂಟುಮಾಡಿದೆ. ಮನೆ ಕಟ್ಟಲು ಕಾಲಾವಕಾಶ ನೀಡಿ, ಆಕೆಗೆ ಆಸ್ತಿ ಹಕ್ಕು ನೀಡಬೇಕು. ಇಲ್ಲದಿದ್ದರೆ, ಈ ಕುರಿತು ನ್ಯಾಯಾಲಯದ ಮೊರೆ ಹೋಗುತ್ತದೆ ಎಂದು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ.....!

Edited By : Manjunath H D
Kshetra Samachara

Kshetra Samachara

26/01/2021 01:16 pm

Cinque Terre

51.71 K

Cinque Terre

6

ಸಂಬಂಧಿತ ಸುದ್ದಿ