ಹುಬ್ಬಳ್ಳಿ : ಕಿತ್ತು ತಿನ್ನುವ ಬಡತನದಲ್ಲಿ ವಿಚಿತ್ರ ಕಾಯಿಲೆಯಿಂದ ಮಕ್ಕಳು ಬಳಲುತ್ತಿದ್ದು, ಮಕ್ಕಳ ಚಿಕಿತ್ಸೆಗೆಗಾಗಿ ಕುಟುಂಬ ಪರದಾಡುತ್ತಿದೆ,ಜೊತೆಗೆ ಆರ್ಥಿಕ ಸಂಕಷ್ಟಕ್ಕೆ ಸಹಾಯದ ನಿರೀಕ್ಷೆಯಲ್ಲಿದೆ.
ಹೌದು ಹೀಗೆ ವಿಚಿತ್ರ ಕಾಯಿಲೆಯಿಂದ ನರಳುತ್ತಿರುವ ಈ ಮುದ್ದಾದ ಮಕ್ಕಳು. ಮಕ್ಕಳು ಕುಳಿತ್ತಲೇ ಅಳುವುದು ಹಾಗೂ ವಿಚಿತ್ರವಾಗಿ ವರ್ತಿಸುವುದನ್ನು ನೋಡಿದ್ರೆ ಕರಳು ಚೂರ್ ಅನಿಸದೆ ಇರಲಾರದು. ಈ ಮುದ್ದಾದ ಮಕ್ಕಳ ಹೆಸರು ಕಾರ್ತಿಕ, ಕುನಾಲ್ ಹಾಗೂ ಗೋವಿಂದ.
ಹೊಸೂರಿನ ವಿನಾಯಕ ಕಬಾಡೆ ಮತ್ತು ಅಶ್ವಿನಿ ಕಬಾಡೆ ದಂಪತಿ ಮಕ್ಕಳು ಇವರು. ಕುನಾಲ್ ಹಾಗೂ ಕಾರ್ತಿಕ ಅವಳಿ ಮಕ್ಕಳಾಗಿದ್ದು, ಕಳೆದ 12 ವರ್ಷಗಳಿಂದ ವಿಚಿತ್ರವಾದ ರೋಗದಿಂದ ಬಳಲುತ್ತಿದ್ರೆ ಇತ್ತ ಕಳೆದ 8 ವರ್ಷದಿಂದ ಮೂರನೇ ಮಗನಾದ ಗೋವಿಂದ ಕೂಡ ಅಂಗವಿಕಲ ಹಾಗೂ ಬುದ್ದಿಮಾಂಧ್ಯನಾಗಿದ್ದಾನೆ.
ಹಂಬಲಿಸಿ ಮಕ್ಕಳನ್ನು ಪಡೆದ ಈ ದಂಪತಿ ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಸಾಕಷ್ಟು ಶ್ರಮವಹಿಸುತ್ತಿದ್ದಾರೆ.
ಒಂದು ಕಾಲದಲ್ಲಿ ಸ್ಥಿತಿವಂತರಾಗಿದ್ದ ಈ ಕುಟುಂಬ ಮಕ್ಕಳ ಚಿಕಿತ್ಸೆಗಾಗಿ ಎಲ್ಲವನ್ನು ಕಳೆದುಕೊಂಡು ಬೀದಿಗೆ ಬಂದಿದೆ.
ಸದ್ಯ ಮಕ್ಕಳ ಔಷಧಿ ಸೇರಿದಂತೆ ಇತರೆ ಖರ್ಚು ನಿರ್ವಹಣೆ ಮಾಡಲಾಗದೆ ಕಂಗಾಲಾಗಿ ಕುಳಿತಿದ್ದಾರೆ.
ಈಗಾಗಲೇ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಯಾವ ಆಸ್ಪತ್ರೆಯಲ್ಲಿಯೂ ಮಕ್ಕಳು ಉಳಿಯುವ ಧೈರ್ಯವನ್ನು ವೈದ್ಯರು ನೀಡುತ್ತಿಲ್ಲ. ಹೊಸೂರಿನಲ್ಲಿ ಪಾನಶಾಪ್ ಇಟ್ಟುಕೊಂಡಿರುವ ವಿನಾಯಕ ಅವರು ಈಗ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಒಮ್ಮೆ ಮೂರು ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ್ರೆ ಲಕ್ಷಾಂತರ ಹಣ ವ್ಯಯಿಸಬೇಕಾಗುತ್ತಿದೆ.
ಹೀಗಾಗಿ ಇಡೀ ಕುಟುಂಬ ಖರ್ಚು ಭರಿಸಲಾಗದೆ ಸಹಾಯಕ್ಕಾಗಿ ಮೊರೆ ಇಡುತ್ತಿದೆ.
ಬೈಟ್- ಅಶ್ವಿನಿ ಕಬಾಡೆ, ಮಕ್ಕಳ ತಾಯಿ ಮಕ್ಕಳ ಚಿಕಿತ್ಸೆಗಾಗಿ ಈಗಾಗಲೇ ಹಲವು ಸಂಘಟನೆಗಳು ಸಾಕಷ್ಟು ಸಹಾಯ ಮಾಡಿವೆ. ಆದ್ರೆ ಇಲ್ಲಿಯವರೆಗೂ ಸರ್ಕಾರದಿಂದ ಹಾಗೂ ಜನಪ್ರತಿನಿಧಿಗಳಿಂದ ಯಾವುದೇ ಸಹಾಯ ಸಹಕಾರ ಸಿಕ್ಕಿಲ್ಲ. ಮಕ್ಕಳ ಚಿಕಿತ್ಸೆಗೆ ಇನ್ನೂ ಲಕ್ಷಾಂತರ ರೂಪಾಯಿ ಹಣದ ಅವಶ್ಯಕತೆ ಇದ್ದು, ಹೃದಯವಂತರು ಸಹಾಯ ಮಾಡುವಂತೆ ಪೋಷಕರು ಮನವಿ ಮಾಡಿದ್ದಾರೆ....
ಸಹಾಯ ಮಾಡುವ ದಾನಿಗಳು
ಈ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಸಂದಾಯ ಮಾಡಬಹುದು…
A/c name- Ashwini vinayak kabadi
Bank name- bank of Baroda
A/no - 07790100029682
Ifsc code- BARB0HUBLIX( Fifth character is zero)
Mobile num
9980824336
8453063337
Kshetra Samachara
22/01/2021 12:50 pm