ಧಾರವಾಡ- ಸುಖದಲ್ಲಿ ಸಂಬಂಧಿಕರು, ಸ್ನೇಹಿತರು ಎಲ್ಲರೂ ಭಾಗಿ ಆಗುತ್ತಾರೆ. ಅದೇ ಕಷ್ಟ ಅಂದ್ರೆ ಎಲ್ಲಾ ಸಂಂಧಗಳು ಕಳಿಚಿ ಹೋಗುತ್ತವೆ. ರಸ್ತೆಯಲ್ಲಿ ಅಪಘಾತವಾದಗ ಸಹ ಜನರು ಪೋಟೋ, ವಿಡಿಯೋ ತೆಗೆದುಕೊಂಡು ನಿಲ್ಲುತ್ತಾರೆ ಸಹ ಯಾರು ಸಹಾಯಕ್ಕೆ ಬರುವುದಿಲ್ಲಾ. ಆದ್ರೆ ಇಲ್ಲೊಬ್ಬ ವಿದ್ಯಾರ್ಥಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಹೀಗೆ ವೃದ್ಧರೊಬ್ಬರ ದೂಡು ಗಾಡಿಗೆ ಕೈಜೋಡಿಸಿ ತಳ್ಳುತ್ತಿರುವ ಇತನ ಹೆಸರು ಸುನಿಲ್. ಮೂಲತಃ ಹುಬ್ಬಳ್ಳಿಯ ನವನಗರದ ನಿವಾಸಿ. ದೂಡು ಗಾಡಿಯಲ್ಲಿ ಕಟ್ಟಿಗೆಯನ್ನು ಹಾಕಿಕೊಂಡು ಧಾರವಾಡದ ಕೋರ್ಟ್ ರಸ್ತೆಯಲ್ಲಿ ಕಷ್ಟ ಪಟ್ಟು ತಳ್ಳಿಕೊಂಡು ಹೋಗುವಾಗ, ಕಣ್ಣಾರೆ ಕಂಡ ಈ ವಿದ್ಯಾರ್ಥಿ ಸುನಿಲ್, ಆ ವೃದ್ದನ ಜೊತೆ ಕೈ ಜೋಡಿಸಿ ಮನೆಯವರೆಗೂ ಮುಟ್ಟಿಸಿ ಬಂದಿರುವ ವಿಡಿಯೋ ಒಂದನ್ನು ನಿಮ್ಮ ಪಬ್ಲಿಕ್ ನೆಕ್ಸ್ಟ್ ಗೆ ಕಳಸಿದ್ದಾರೆ. ಈ ದೃಶ್ಯ ಎಲ್ಲರ ಮನ ಕಲಕುವಂತಿದೆ. ಜನರ ಕಷ್ಟ ನೋಡಿ ಅಯ್ಯೋ ಪಾಪ ಅನ್ನುವುದಕ್ಕಿಂತ ಅವರ ಕಷ್ಟದಲ್ಲಿ ಭಾಗಿಯಾಗಬೇಕು ಎಂದು ಸುನಿಲ್ ಎಲ್ಲರಿಗೂ ಮಾದರಿಯಾಗಿದ್ದಾರೆ.....
Kshetra Samachara
20/01/2021 06:37 pm