ಹುಬ್ಬಳ್ಳಿ- ಈಗಾಗಲೇ ಗ್ರಾಮ ಪಂಚಾಯತಿಯ ಮೊದಲ ಹಂತದ ಚುನಾವಣೆ ಮುಗಿದಿದೆ. ಮತ್ತೆ ಎರಡನೇ ಹಂತದ ಚುನಾವಣೆಯಲ್ಲಿ ಗೆಲುವಿಗಾಗಿ ಅಭ್ಯರ್ಥಿಗಳು ತೀವ್ರ ಕಸರತ್ತು ನಡೆಸಿದ್ದಾರೆ. ಈ ನಡುವೆ ಹುಬ್ಬಳ್ಳಿ ತಾಲ್ಲೂಕಿನ ಕೊಟಗೊಂಡಹುಣಸಿ ಗ್ರಾಮದಲ್ಲಿ ಬಾಲಕನೋರ್ವ ಮತದಾನ ಜಾಗೃತಿ ಕೈಗೊಂಡಿದ್ದಾನೆ.
ಹೌದು, ಪ್ರಜ್ವಲ್ ನಾಯ್ಕ ಎನ್ನುವ ಬಾಲಕನೇ ಮತದಾನ ಜಾಗೃತಿ ಮೂಡಿಸುತ್ತಿದ್ದು, ಇತ ಹನುಮಂತನ ವೇಶ ಧರಿಸಿ ಕೈಯಲ್ಲಿ ಪ್ರಾಮಾಣಿಕವಾಗಿ ಮತದಾನ ಮಾಡಿ, ಎನ್ನುವ ಪ್ಲೇ ಕಾರ್ಡ್ ಹಿಡಿದು ಸಾರ್ವಜನಿಕರಿಗೆ ಸಂದೇಶ ಸಾರುತ್ತಿದ್ದಾನೆ. ಭಾರತಿ ನಾಯ್ಕ, ಬಾಬು ನಾಯ್ಕ ದಂಪತಿಗಳ ಮುದ್ದಿನ ಮಗನಾಗಿದ್ದು, ಗ್ರಾಮ ಪಂಚಾಯತಿ ಚುನಾವಣೆ ಹಿನ್ನಲೆಯಲ್ಲಿ ಬಾಲಕ ಪ್ರಜ್ವಲ್, ಹಳ್ಳಿ ಹಳ್ಳಿಗಳಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾನೆ. ಈ ಬಾಲಕನ ಕಾರ್ಯಕ್ಕೆ ಪಾಲಕರು ಪ್ರೋತ್ಸಾಹಿಸುತ್ತಿದ್ದಾರೆ. ಅಲ್ಲದೇ ಗ್ರಾಮದ ಜನರು ಕೂಡ ಬಾಲಕನ ಈ ಮಾದರಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ....
Kshetra Samachara
27/12/2020 04:12 pm