ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾವೈಕ್ಯತೆಯ ಸಂಕೇತವಾದ ಹುಬ್ಬಳ್ಳಿಯ ರಾಮನಗರ ದೂದ್ ಪೀರಾ ದರ್ಗಾ !

ಪಬ್ಲಿಕ್ ನೆಕ್ಸ್ಟ್ ವಿಶೇಷ- ಈರಣ್ಣ ವಾಲಿಕಾರ

ಹುಬ್ಬಳ್ಳಿ: ಧರ್ಮ ಧರ್ಮಗಳ ಮಧ್ಯೆ ಕೋಮು ಗಲಭೆ ನಡೆಯುತ್ತಿದೆ. ಮಂದಿರಗಳಲ್ಲಿ ಧ್ವನಿವರ್ಧಕ ಹಚ್ಚುವ ಗೊಂದಲ. ಇದರ ನಡುವೆ ನಾವೆಲ್ಲರೂ ಒಂದೇ. ಒಂದೇ ತಾಯಿಯ ಮಕ್ಕಳಿದ್ದಂತೆ ಎಂಬಂತೆ, ಇಲ್ಲೊಂದು ದರ್ಗಾದಲ್ಲಿ ಹಿಂದೂ ಮಹಿಳೆಯೊಬ್ಬರು ಪೂಜೆ ಮಾಡುವ ಮೂಲಕ ಭಾವೈಕ್ಯತೆಯ ಮೆರೆದಿದ್ದಾರೆ.

ಹೌದು. ಹೀಗೆ ದರ್ಗಾದಲ್ಲಿ ಪೂಜೆ ಮಾಡುತ್ತಿರುವ ಈ ಹಿಂದೂ ಮಹಿಳೆಯ ಹೆಸರು ಹನಮವ್ವ ಗುಡಗುಂಟಿ. ಹುಬ್ಬಳ್ಳಿ ಕೇಶ್ವಾಪೂರದ ರಾಮನಗರ ದೂದಪಿರಾ ದರ್ಗಾ. ಕಳೆದ 62 ವರ್ಷಗಳಿಂದ ಗುಡಗುಂಟಿ ಮನೆತನದವರು ಈ ದರ್ಗಾದಲ್ಲಿ ಪೂಜೆ ಸಲ್ಲಿಸುತ್ತಿರುವುದು ವಿಶೇಷವಾಗಿದೆ. ಮುಸ್ಲಿಂ ಸಮುದಾಯದವರು ಕೂಡ ಇವರಿಗೆ ಅಷ್ಟೇ ಸಪೋರ್ಟ್ ಮಾಡಿದ್ದಾರೆ. ಇಲ್ಲಿಯವರೆಗೆ ಯಾರು ಕೂಡ ಇವರಿಗೆ ತಕರಾರು ಮಾಡಿಲ್ಲವಂತೆ. ಮುಸ್ಲಿಂ ಧರ್ಮದವರು ಬಂದು ಇಲ್ಲಿ ನಮಾಜ್ ಮಾಡಿ ಹೋಗುತ್ತಾರೆ. ಹೀಗೆ ಪೂಜೆ ಮಾಡುತ್ತಿರುವ ಹನಮವ್ವ ಅವರು ಅನೇಕ ವರ್ಷಗಳಿಂದ ಈ ದರ್ಗಾದಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ. ಇವರ ತಂದೆ,ತಾಯಿಯ ತೀರಿ ಹೋದ ನಂತರ ಇವರೇ ಪೂಜೆ ಮುಂದುವರೆಸಿಕೊಂಡು ಬಂದಿದ್ದಾರೆ.

ಈ ದರ್ಗಾದಲ್ಲಿ ಒಂದು ಕಡೆ ಹಿಂದೂಗಳು ಪೂಜೆ ಮಾಡುತಿದ್ದರೆ, ಇನ್ನೊಂದಡೆ ಮುಸ್ಲಿಂರು ನಮಾಜ್ ಮಾಡುತ್ತಾರೆ. ಹೀಗೆ ಎಲ್ಲ ಧರ್ಮದವರು ಭಾವೈಕ್ಯತೆಯಿಂದ, ಸಾಮರಸ್ಯದಿಂದ ಸಮಾಜದಲ್ಲಿ ಇದ್ದು, ಇಂತಹ ಭಾವೈಕ್ಯತೆಯ ಕೇಂದ್ರಗಳು ಇನ್ನೂ ಹೆಚ್ಚಾಗಲಿ ಎಂದು ಎಲ್ಲರು ಸೇರಿ ಪ್ರತಿ ವರ್ಷ ಸಂದಲ್ ಮತ್ತು ಉರುಸು ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಜಾತಿ ಧರ್ಮ ಎಂದು ಕಚ್ಚಾಡುತ್ತಿರುವವರ ಮಧ್ಯ ಕೇಶ್ವಾಪೂರ ರಾಮನಗರದಲ್ಲಿರುವ ದೂದಪೀರಾ ದರ್ಗಾದಲ್ಲಿ ಹಿಂದೂ ಮನೆತನದವರು ಪೂಜೆ ಸಲ್ಲಿಸುತ್ತಿರುವುದು ಎಲ್ಲರಲ್ಲೂ ಸಂತಸ ಮೂಡಿದೆ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

11/05/2022 04:52 pm

Cinque Terre

45.62 K

Cinque Terre

5

ಸಂಬಂಧಿತ ಸುದ್ದಿ