ಹಾವೇರಿ: ಹಾನಗಲ್ ತಾಲೂಕಿನ ರಾಮತೀರ್ಥಹೊಸಕೊಪ್ಪ ಹಳ್ಳಿಯೊಲ್ಲಿಂದು ಒಂದು ಅಪರೂಪದ ಮದುವೆ ನಡೆದಿದೆ. ಹಳ್ಳಿ ಹುಡುಗ ವಿಯೆಟ್ನಾಂ ಹುಡುಗಿಯ ಈ ಮದುವೆಗೆ ಇಡೀ ಊರೇ ಸಾಕ್ಷಿ ಆಗಿದೆ. ಯಾಕೆ ಗೊತ್ತೆ ? ಇದು ನಿಜಕ್ಕೂ ವಿಶೇಷ ಮದುವೆ. ಬನ್ನಿ, ಹೇಳ್ತೀವಿ.
ವಿಯೆಟ್ನಾಂ ನಿವಾಸಿ ಕುಯಾನ್ ತ್ರಾಂಗ್ ಹೆಸರಿನ ಯುವತಿಯನ್ನೇ ರಾಮತೀರ್ಥಹೊಸಕೊಪ್ಪ ಯುವಕ ಪ್ರದೀಪ್ ಮದುವೆ ಆಗಿದ್ದಾರೆ. ಆದರೆ ಈತ ಎಲ್ಲಿ ಆಕೆ ಎಲ್ಲಿ ಇದೆಲ್ಲ ಹೇಗೆ ಸಾಧ್ಯ ಅಂತ ನಿಮಗೆ ಅನಿಸಬಹುದು.
ನಿಜ, ಪ್ರದೀಪ್ ಖಂಡನವರ ಹಳ್ಳಿಯಲ್ಲಿ ಕೂಲಿ ಕೆಲಸ ಮಾಡುವ ಯುವಕ.ಆದರೆ ಯೋಗಾಭ್ಯಾಸವನ್ನ ಅಷ್ಟೇ ಶ್ರದ್ಧೆಯಿಂದಲೆ ಕಲೆತಿದ್ದಾನೆ. ಅದಕ್ಕೇನೆ ವಿಯಟ್ನಾಂನ ಕಂಪನಿಯೊಂದರಲ್ಲಿ ಯೋಗ ಟೀಸರ್ ಆಗಿಯೇ ಕೆಲಸಕ್ಕೂ ಸೇರಿದ್ದಾನೆ.
ಈ ಸಮಯದಲ್ಲಿಯೇ ಪ್ರೀತಿ ಅದೇ ಕುಯಾನ್ ತ್ರಾಂಗ್ ಜೊತೆಗೆ ಪ್ರೇಮಾಂಕುರ ಆಗಿದೆ. ಅದು ಈಗ ಮದುವೆ ಹಂತಕ್ಕೂ ಬಂದು ತಲುಪಿದೆ.ಗುರು-ಹಿರಿಯರ ಸಮ್ಮುಖದಲ್ಲಿಯೇ ಶಾಸ್ತ್ರೊಕ್ತವಾಗಿಯೇ ಪ್ರೀತಿ ಮತ್ತು ಪ್ರದೀಪ್ ಮದುವೆ ಆಗಿದ್ದಾರೆ. ಊರಲ್ಲಿ ಈಗ ಇದೇ ಚರ್ಚೆ.
Kshetra Samachara
15/12/2021 02:07 pm