ಹುಬ್ಬಳ್ಳಿ: ರೈಲ್ವೇ ಸೇವೆ ಅಂದ್ರೇ ಎಲ್ಲರಿಗೂ ಅಚ್ಚುಮೆಚ್ಚು, ಬಡವರ ಪಾಲಿಗಂತೂ ರೈಲ್ವೇ ಸೇವೆ ಆರ್ಥಿಕ ಸ್ಥಿತಿಯನ್ನು ಸರಿದೂಗಿಸಿಕೊಂಡು ಹೋಗುವಂತ ಸೇವೆಯಾಗಿದೆ. ಇಂತಹ ರೈಲ್ವೇ ಇಲಾಖೆ ಈಗ ಪರಿಸರ ಸ್ನೇಹಿಯಾಗಿದ್ದು,ವಿನೂತನ ಕಾರ್ಯಚಟುವಟಿಕೆ ಮೂಲಕ ಮತ್ತಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿದೆ.
ಐ ಲವ್ ಹುಬ್ಬಳ್ಳಿ, ರೈಲ್ವೇ ಮ್ಯೂಸಿಯಂ, ಕಲ್ಯಾಣ ಕೇಂದ್ರ ಹಾಗೂ ಅನೇಕ ಜನಪರ ಕಾರ್ಯಗಳ ಮೂಲಕ ಉತ್ತಮ ಸೇವೆಯನ್ನು ನೀಡುವಲ್ಲಿ ಮುಂಚೂಣಿಯಲ್ಲಿರುವ ರೈಲ್ವೇ ಇಲಾಖೆ ಈಗ ಮಹಾತ್ಮ ಗಾಂಧೀಜಿಯವರ ಕನಸಿನ ಸ್ವಚ್ಚ ಭಾರತ ಸಾಕಾರಗೊಳಿಸಿ ಪರಿಸರ ಪ್ರೇಮವನ್ನು ಎತ್ತಿ ಹಿಡಿದಿದ್ದು,ಹುಬ್ಬಳ್ಳಿಯಲ್ಲಿ 'ವಸುಂದರಾ ನರ್ಸರಿ' ನಿರ್ಮಾಣ ಮಾಡುವ ಮೂಲಕ ಪರಿಸರ ಪ್ರೇಮವನ್ನು ಎತ್ತಿ ತೋರುತ್ತಿದೆ.
ಹುಬ್ಬಳ್ಳಿ ನೈಋತ್ಯ ರೈಲ್ವೇ ವಲಯದ ವರ್ಕ್ ಶಾಫ್ ಆವರಣದ ವಸುಂದರಾ ನರ್ಸರಿ ಸ್ಥಾಪನೆ ಮಾಡಿದ್ದು,ಎಲ್ಲೆಡೆಯೂ ಹಸಿರುಮಯ ಗೊಳಿಸಿದೆ.ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಸ್ವಚ್ಚತಾ ಪಾಕ್ಷಿಕ ಯೋಜನೆಯಡಿ ರೈಲ್ವೇ ನಿಲ್ದಾಣ ಕಾಲನಿಯಲ್ಲಿ ಹತ್ತು ಹಲವಾರು ಹೂವಿನ ಹಾಗೂ ಔಷಧ ಗಿಡಗಳನ್ನು ಬೆಳೆಸುವ ಮೂಲಕ ಪರಿಸರ ಪ್ರೇಮಕ್ಕೆ ಸಾಕ್ಷಿಯಾಗಿದೆ.
ನೈಋತ್ಯ ರೈಲ್ವೇ ವ್ಯವಸ್ಥಾಪಕ ನಿರ್ದೇಶಕ ಅಜಯಕುಮಾರ್ ಸಿಂಗ್ ನಿರ್ದೇಶನದಲ್ಲಿ ರೈಲ್ವೇ ಸಿಬ್ಬಂದಿಗಳು ಸ್ವಯಂಪ್ರೇರಿತರಾಗಿ ಇಂತಹದೊಂದು ಮಹತ್ವಪೂರ್ಣ ಕಾರ್ಯಕ್ಕೆ ಕೈ ಹಾಕಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ.
Kshetra Samachara
07/10/2020 07:27 pm