ವರದಿ: ಮಲ್ಲಿಕಾರ್ಜುನ ಪುರದನಗೌಡರ
ಕಲಘಟಗಿ:ಕೊರೋನಾ ಮಹಾಮಾರಿಗೆ ಸಿಲುಕಿದ ವೃತ್ತಿ ರಂಗಭೂಮಿ ನೆಲಕ್ಕಚ್ಚಿದ್ದು,ರಂಗ ಭೂಮಿ ಪ್ರದರ್ಶನಗಳು ರದ್ಧಾಗಿ,ರಂಗ ಕಲಾವಿದ ರ ಬದುಕು ಸಂಕಷ್ಟದಲ್ಲಿ ಇದೆ.
ಕಲಘಟಗಿ ಗ್ರಾಮದೇವಿ ಜಾತ್ರೆಗೆ ಬಂದ ವೃತ್ತಿ ರಂಗಭೂಮಿಯ ನಾಟಕ ಕಂಪನಿಗಳು ಒಂದು ತಿಂಗಳು ಮಾತ್ರ ಪ್ರದರ್ಶನ ನೀಡಿದ್ದವು,ಈಗ
ಕೊರೋನಾ ಹಾಗೂ ಲಾಕ್ ಡೌನ್ ಕಾರಣ ಎಂಟು ತಿಂಗಳುಗಳಿಂದ ಪ್ರದರ್ಶನವಿಲ್ಲದೆ ಕಲಾವಿದರು ತೊಂದರೆಯಲ್ಲಿ ಇದ್ದಾರೆ.
ಕೊರೋನಾ ಮಹಾಮಾರಿಯಿಂದ ರಂಗಭೂಮಿ ಸೊರಗಿದೆ.ಕಲಾವಿದರ ಬದುಕು ಬಹಳಷ್ಟು ಸಂಕಷ್ಟದಲ್ಲಿ ಇದ್ದು,ಸರಕಾರ ರಂಗಭೂಮಿಯ ಏಳಿಗೆಗೆ ಸಹಾಯ ಹಸ್ತ ಚಾಚ ಬೇಕಿದೆ.
Kshetra Samachara
08/11/2020 11:59 am