ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಹಳ್ಳಿ ಬದಲಾಯಿಸಿತು ರಾಷ್ಟ್ರೀಯ ಸೇವಾ ಯೋಜನೆ

ಕುಂದಗೋಳ: ಒಂದು ಹಳ್ಳಿಯ ಅಭಿವೃದ್ಧಿ ಕಾರ್ಯಕ್ಕೆ ಇಲ್ಲೊಂದು ಶಿಕ್ಷಣ ಸಂಸ್ಥೆಯು ಸ್ವಯಂ ಪ್ರೇರಿತ ಕಾರ್ಯ ಮಾಡಿ ಹಳ್ಳಿಯ ಬೀದಿ, ಕೆರೆ, ಕಟ್ಟೆ ಸ್ವಚ್ಛತೆ ಜೊತೆಗೆ ಗ್ರಾಮೀಣ ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಕೈಗೊಂಡಿದೆ.

ಕುಂದಗೋಳ ಪಟ್ಟಣದ ಜೆ.ಎಸ್.ಪಾಟೀಲ ಕಲಾ ಹಾಗೂ ವಾಣಿಜ್ಯ ವಿದ್ಯಾಲಯದ ವಿದ್ಯಾರ್ಥಿಗಳು ಗುಡೇನಕಟ್ಟಿ ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರ ಕೈಗೊಂಡು, ಗ್ರಾಮದ ಬೀದಿ ಸ್ವಚ್ಛತೆ ಹಾಗೂ ಕೆರೆ ಸ್ವಚ್ಛತೆ ಜೊತೆ ನೈರ್ಮಲ್ಯದ ಕೆಲಸಕ್ಕೆ ಅಣಿಯಾಗಿದ್ದಾರೆ.

ವಿದ್ಯಾರ್ಥಿಗಳ ಕಾರ್ಯಕ್ಕೆ ಶಾಲಾ ಪ್ರಾಧ್ಯಾಪಕರು ಬೆಂಬಲ ನೀಡಿ, ಏಳು ದಿನಗಳ ಕಾಲ ಶ್ರಮದಾನದ ಮೂಲಕ ಕೆಲಸ ಕೈಗೊಂಡು, ನಿತ್ಯ ಸಾಯಂಕಾಲ ಮಾರುತಿ ದೇವಸ್ಥಾನದಲ್ಲಿ ಒಂದಿಲ್ಲೊಂದು ವಿಷಯದ ಕುರಿತು ಚರ್ಚೆ ಜೊತೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಗ್ರಾಮಸ್ಥರಿಗೆ ಆರೋಗ್ಯ, ನೈರ್ಮಲ್ಯ, ಸ್ವಚ್ಛತೆ, ನೀರಿನ ಬಳಕೆಯ ಜಾಗೃತಿ ಮೂಡಿಸಿತ್ತಿದ್ದಾರೆ. ಈ ಕಾಲೇಜು ವಿದ್ಯಾರ್ಥಿಗಳ ರಾಷ್ಟ್ರೀಯ ಸೇವಾ ಯೋಜನೆಗೆ ಹರ್ಲಾಪುರ ಕಲಾ ತಂಡಗಳು ಸಾಥ್ ನೀಡಿ ಹಾಡಿನ ಮೂಲಕ ಹಳ್ಳಿಗರನ್ನು ರಂಜಸಿವೆ.

Edited By : Manjunath H D
Kshetra Samachara

Kshetra Samachara

15/03/2022 05:33 pm

Cinque Terre

19.16 K

Cinque Terre

1

ಸಂಬಂಧಿತ ಸುದ್ದಿ