ಧಾರವಾಡ : ಕರ್ನಾಟಕ ವಿಶ್ವವಿದ್ಯಾಲಯದ ಧಾರವಾಡದ 70 ಮತ್ತು 71 ಘಟಿಕೋತ್ಸವದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪ್ರಧಾನ ಸಮಾರಂಭದಲ್ಲಿ ಹಾವೇರಿ ಮೂಲದ ರೈತನ ಮಗಳೋಬ್ಬಳು 9 ಪದಕ ಪಡೆಯುವ ಮೂಲಕ ಸಾಧನೆಗೈದಿದ್ದಾಳೆ.
ಇಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಜರುಗಿದ 70-71 ಘಟಿಕೋತ್ಸವದ ಸಮಾರಂಭದಲ್ಲಿ ಕವಿವಿ ಆರ್.ಸಿ. ಹಿರೇಮಠ ಕನ್ನಡ ವಿಭಾಗದ ಲಕ್ಷ್ಮೀ ದೊಡ್ಡಗೌಡರ ೯ ಚಿನ್ನದ ಪದಕ ಪಡೆಯುವ ಮೂಲಕ ಚಿನ್ನದ ಹುಡುಗಿಯಾಗಿ ಹೊರಹೋಮ್ಮಿದ್ದಾಳೆ.
ಹಾವೇರಿಯ ಸವಣೂರ ತಾಲೂಕಿನ ನಾಯಿಕೆರೂರ ಗ್ರಾಮದ ಕೃಷಿ ಕುಟುಂಬದಲ್ಲಿ ಜನಿಸಿದ ಲಕ್ಷ್ಮಿ ದೊಡ್ಡಗೌಡರ. ಚಿಕ್ಕಂದಿನಿಂದಲೂ ತಂದೆಯ ಕೃಷಿ ಕೆಲಸಕ್ಕೆ ಸಹಾಯ ಮಾಡುತ್ತ ವಿದ್ಯಾಭ್ಯಾಸ ಮಾಡಿದ್ದಾರೆ. ಇದೆ ವೇಳೆ ಮಾತನಾಡಿದ ಲಕ್ಷ್ಮಿ ಪ್ರಶಸ್ತಿ ಸಿಕ್ಕಿದ್ದು ಖುಷಿ ತಂದಿದೆ ವಿಡಿಯೋ ಕಲಿಸಿದ ಎಲ್ಲಾ ಗುರುಗಳಿಗೂ ಹಾಗೂ ಸಹಕಾರ ನೀಡಿದ ಕುಟುಂಬಕ್ಕೂ ಧನ್ಯವಾದ ತಿಳಿಸಿದರು.
Kshetra Samachara
09/10/2021 04:59 pm