ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ನಟನೆಯ ಮೂಲಕವೇ ಮಕ್ಕಳಿಗೆ ಹತ್ತಿರವಾದ ಶಿಕ್ಷಕ

ಧಾರವಾಡ: ವಿದ್ಯಾರ್ಥಿಗಳಿಗೆ ಅರ್ಥವಾಗುವ ರೀತಿಯಲ್ಲಿ ಬೋಧನೆ ಮಾಡುವುದರ ಜೊತೆಗೆ ರಂಗಭೂಮಿ ಕ್ಷೇತ್ರದಲ್ಲಿಯೂ ಹವ್ಯಾಸಿ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ ಧಾರವಾಡದ ಶಿಕ್ಷಕ ರಾಜೀವಸಿಂಗ್ ಹಲವಾಯಿ.

ಹೆಬ್ಬಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಗಂಡು ಮಕ್ಕಳ ಶಾಲೆಯ ಸಹ ಶಿಕ್ಷಕರಾದ ಇವರು ತಮ್ಮ 12 ನೇ ವಯಸ್ಸಿನಲ್ಲಿಯೇ ಬಣ್ಣ ಹಚ್ಚಿದ ಇವರು ಪ್ರಥಮವಾಗಿ ‘ಚಂದ್ರಹಾಸ’, ಪ್ರೌಢಶಾಲೆಯ ದಿನಗಳಲ್ಲಿ ನೀಲಕುದುರೆ ಮತ್ತು ಗುಡ್ಡದ ಭೂತ ನಾಟಕಗಳಲ್ಲಿ ಮನೋಜ್ಞವಾಗಿ ಅಭಿನಯಿಸಿ ಕಾಲೇಜು ದಿನಗಳಲ್ಲಿ ಏಕಪಾತ್ರಾಭಿನಯದ ಮೂಲಕ ಎಲ್ಲರ ಗಮನ ಸೆಳೆದಿದ್ದರು.

‘ಜೈಸಿದ ನಾಯಕ’, ‘ನಾಯಿ ಕಥೆ’ ,ಛತ್ರಪತಿ ಶಿವಾಜಿ,ಅಮಟೂರು ಬಾಳಪ್ಪ’, ‘ನಿಜಗುಣ ಶಿವಯೋಗಿ’,‘ಕನಕ ವಿಜಯ’, ‘ಜಗಜ್ಯೋತಿ ಬಸವೇಶ್ವರ’,ಸಂಗೊಳ್ಳಿ ರಾಯಣ್ಣ,ಸಂತ ಶಿಶುನಾಳ ಶರೀಫ್,ಬೇಡರ ಕಣ್ಣಪ್ಪ,ತಂಗಿಗಾಗಿ ತ್ಯಾಗ, ಮಹರ್ಷಿ ವಾಲ್ಮೀಕಿ,ಡಾ.ಬಿ.ಆರ್.ಅಂಬೇಡ್ಕರ (ರೂಪಕ),ಮಂಡೋದರಿ ಕಲ್ಯಾಣ,ಅಲ್ಲಮಪ್ರಭು,ತಿರುಮಂತ್ರ,ಇದು ಹಿಂಗ್ಯಾಕ ಆತು,ನಂಗೆಲ್ಲಾ ಗೊತ್ತೈತಿ ಹೀಗೆ ಇನ್ನೂ ಅನೇಕ ನಾಟಕಗಳಲ್ಲಿ ಅಭಿನಯಿಸಿ ತಮ್ಮ ಕಲಾಪ್ರತಿಭೆ ಮೆರೆದಿದ್ದಾರೆ.

ಇವರ ರಂಗಕಲಾ ಸೇವೆಗೆ ಶಾರದಾ ಶಾಲ್ಮಲಾ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿವೆ.

Edited By : Manjunath H D
Kshetra Samachara

Kshetra Samachara

19/09/2021 06:47 pm

Cinque Terre

67.15 K

Cinque Terre

20

ಸಂಬಂಧಿತ ಸುದ್ದಿ