ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅಬ್ಯಾಕಸ್ ಸ್ಪರ್ಧೆಯಲ್ಲಿ ಇವನೇ ಚಾಂಪಿಯನ್

ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ

ಧಾರವಾಡ: ಸಾಧನೆಗೆ ಸಾಕ್ಷಿಯಾಗಿರುವ 16 ಕ್ಕೂ ಹೆಚ್ಚು ಪುರಸ್ಕಾರ.. ಸಾರ್ಥಕ ಭಾವನೆಯಿಂದ ಮುಗುಳು ನಗೆ ಬಿರುವ ಹುಡುಗ..ಕಣ್ಮನ ಸೆಳೆಯುವ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಮೆಡಲ್ಸ್.. ಅಂತರರಾಷ್ಟ್ರೀಯ ಮಟ್ಟದಲ್ಲಿ ಧಾರವಾಡದ ಹೆಸರು ಬೆಳಗಿಸಿ ಸಾಧನೆಗೈದ ಅಪ್ರತಿಮ ಸಾಧಕ ಈ ಬಾಲಕ...

ಗ್ಲೋಬಲ್ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಹಾಗೂ ಧಾರವಾಡದ ಬೇನೋ ಬ್ರೈನ್ ಅಡ್ವಾನ್ಸ್ ಅಬ್ಯಾಕಸ್ ಸ್ಕಿಲ್ ಡೆವೆಲಪಮೆಂಟ್ ಪ್ರೋಗ್ರಾಂ ಸಂಸ್ಥೆಯ ವಿದ್ಯಾರ್ಥಿಯ ಸಾಧನೆ ಎಲ್ಲರಿಗೂ ಸ್ಪೂರ್ತಿದಾಯಕ. ಧಾರವಾಡ ಲಕ್ಷ್ಮೀನಗರದ ಈ ಪುಟ್ಟ ಹುಡುಗನ ಹೆಸರು ವೇದ ಪ್ರಶಾಂತ ರಾಯ್ಕರ.

6 ನೇ ಅಂತರರಾಷ್ಟ್ರೀಯ ಮಟ್ಟದ ಅಬ್ಯಾಕಸ್ ಆನ್ ಲೈನ್ ಸ್ಪರ್ಧೆಯಲ್ಲಿ ವೇದ ಸರಿ ಸುಮಾರು 16 ಪ್ರಶಸ್ತಿ ಪುರಸ್ಕಾರ ಪಡೆದು ಈಗ ದೇಶದ ಗಮನ ತನ್ನತ್ತ ಸೆಳೆದಿದ್ದಾನೆ. ಧಾರವಾಡ ಬೇನೋ ಬ್ರೇನ್ ಅಡ್ವಾನ್ಸ್ ಅಬ್ಯಾಕಸ್ ಸ್ಕಿಲ್ ಡೆವೆಲಪಮೆಂಟ್ ಪ್ರೋಗ್ರಾಂ ಸಂಸ್ಥೆಯಿಂದ ಶಿಕ್ಷಕಿ ತನುಜಾ ಅಗ್ನಿಹೋತ್ರಿ ಅವರು ಈತನಿಗೆ ಕೌಶಾಲ್ಯಭಿವೃದ್ಧಿ ತರಬೇತಿ ನೀಡುತ್ತಿದ್ದಾರೆ ಅವನಲ್ಲಿ ಪ್ರತಿಭೆ ಇದೆ ಆತ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸುತ್ತಾರೆ ಶಿಕ್ಷಕಿ ತನುಜಾ.

ವೇದ ಮೊದಲ ತರಗತಿಯಿಂದಲೇ ಅಬ್ಯಾಕಸ್‌ ತರಬೇತಿ ಆರಂಭಿಸಿದ್ದ. ಮೂರು ತಿಂಗಳಿಗೆ ಒಂದು ಅವಧಿಯಂತೆ ಹತ್ತು ಅವಧಿಯಲ್ಲಿ ಸಂಪೂರ್ಣ ಅಬ್ಯಾಕಸ್‌ನ ತಂತ್ರಗಳನ್ನು, ಗಣಿತ ಹಾಗೂ ವಿವಿಧ ವಿಷಯಗಳಲ್ಲೂ ಪರಿಣಿತಿ ಹೊಂದಿದ್ದಾನೆ ಈತನ ಸಾಧನೆಗೆ ಅವರ ಪಾಲಕರು ಸಹ ಖುಷಿ ಹಂಚಿಕೊಂಡಿದ್ದಾರೆ. ಈ ಕುರಿತು ಸ್ವತಃ ವೇದ ರಾಯ್ಕರ್ ತನಗೆ ಈ ಬಹುಮಾನ ಪುರಸ್ಕಾರಗಳನ್ನು ನೀಡಿದ ಅಬ್ಯಾಕಸ್‌ನ ಸಂಸ್ಥೆಗೆ ಧನ್ಯವಾದ ತಿಳಿಸುತ್ತಾನೆ.

6ನೇ ಅಂತರರಾಷ್ಟ್ರೀಯ ಆನ್ ಲೈನ್ ಸ್ಪರ್ಧೆಯಲ್ಲಿ ಧಾರವಾಡದ ವೇದ ರಾಯ್ಕರ್ ಸರಿಸುಮಾರು 16 ಬಹುಮಾನ ಪಡೆದು ಧಾರವಾಡದ ಹೆಸರು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡಿದ್ದು ಈ ಪುಟ್ಟ ಬಾಲಕನ ಭವಿಷ್ಯ ಉಜ್ವಲವಾಗಲಿ. ಈತ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದು ನಮ್ಮ ಹಾರೈಕೆ.

Edited By : Manjunath H D
Kshetra Samachara

Kshetra Samachara

24/01/2021 01:52 pm

Cinque Terre

54.8 K

Cinque Terre

7

ಸಂಬಂಧಿತ ಸುದ್ದಿ