ಹುಬ್ಬಳ್ಳಿ: ಆತ ಹುಬ್ಬಳ್ಳಿಯ ಪುಟ್ಟ ಬಾಲಕ.ಮೂರ್ತಿ ಚಿಕ್ಕದಾದರೂ ಕೀರ್ತಿಯನ್ನು ಆಕಾಶದೆತ್ತರಕ್ಕೆ ಬೆಳೆಯುವಂತೆ ಮಾಡಿದ್ದಾನೆ.ಆತನಲ್ಲಿರುವ ಅಗಾಧವಾದ ನೆನಪಿನ ಶಕ್ತಿಯಿಂದ ದೇಶವೇ ತನ್ನತ್ತ ನೋಡುವಂತೆ ಮಾಡಿದ್ದಾನೆ.ಹಾಗಿದ್ದರೇ ಯಾರು ಆ ಬಾಲಕ ಆತ ಮಾಡಿದ್ದಾದರೂ ಏನು ಅಂತೀರಾ ಹಾಗಾದ್ರೆ ಮುಂದೆ ಓದಿ ..
ಹೀಗೆ ಕೈಯಲ್ಲಿ ಪುರಸ್ಕಾರದ ಪತ್ರ ಹಾಗೂ ಕೊರಳಲ್ಲಿ ಪದಕ ಹಾಕಿಕೊಂಡಿರುವ ಬಾಲಕನ ಹೆಸರು ಆರ್ಯನ್ ಶೆಟ್ಟರ್ ಹುಬ್ಬಳ್ಳಿ ಗಣೇಶ ಪೇಟೆಯ ಈ ಬಾಲಕ ಕೇವಲ 6 ವರ್ಷ 7 ತಿಂಗಳು ವಯೋಮಾನದ ಬಾಲಕ ತನ್ನಲ್ಲಿರುವ ಅಗಾಧವಾದ ಜ್ಞಾಪಕ ಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಗೋಲ್ಡ್ ಮೆಡಲ್ ಪಡೆಯುವ ಮೂಲಕ ದಾಖಲೆ ಮಾಡಿದ್ದಾನೆ.ಹೌದು..186 ಕ್ಕೂ ಹೆಚ್ಚು ವಿರುದ್ಧಾರ್ಥಕಪದ,ಅಂಕಿಅಂಶಗಳನ್ನು ಇಳಿಕೆ ಕ್ರಮದಲ್ಲಿ ಬರೆಯುವಂತ ಹಾಗೂ ಕೋಟಿ ಸಂಖ್ಯೆಗಳನ್ನು ನಿರರ್ಗಳವಾಗಿ ಬರೆಯುವ ಮೂಲಕ ಇತ್ತೀಚೆಗೆ ನಡೆದ ಆನ್ ಲೈನ್ ಸ್ಪರ್ಧೆಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ್ದಾನೆ.
ಆರ್ಯನ್ ಕಿರಣ ಶೆಟ್ಟರ್, ಕಿರಣ್ ಶೆಟ್ಟರ್ ಹಾಗೂ ನೀಲಾಂಬಿಕಾ ಅವರ ಪುತ್ರನಾಗಿದ್ದು, ಹುಬ್ಬಳ್ಳಿಯ ಚಿನ್ಮಯಿ ವಿದ್ಯಾಲಯದಲ್ಲಿ 1ನೇ ತರಗತಿ ಓದುತ್ತಿದ್ದಾನೆ.ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲಿಯೇ ಇರುವ ಸಂದರ್ಭದಲ್ಲಿ ಪಾಲಕರು ತಮ್ಮ ಮಗುವಿನಲ್ಲಿರು ಜ್ಞಾಪಕ ಶಕ್ತಿಯನ್ನು ಗುರುತಿಸಲು ಸಾಧ್ಯವಾಯಿತು. ಅಲ್ಲದೇ ಮನೆಯೇ ಮೊದಲ ಪಾಠ ಶಾಲೆ ಎಂಬುವಂತೇ ಮನೆಯಲ್ಲಿಯೇ ಆತನಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ದಾಖಲೆ ಬರೆಯಲು ತಂದೆ ಹಾಗೂ ತಾಯಿ ಕಾರಣರಾಗಿದ್ದಾರೆ.ಮಗುವಿನ ಈ ಸಾಧನೆಗೆ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.
ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಪ್ರತಿಭಾವಂತ ಪ್ರತಿಭೆಗಳಿಗೆನೂ ಕಡಿಮೆ ಇಲ್ಲ.ಅಲ್ಲದೇ ಪೂರಕ ವೇದಿಕೆಗಳಿಲ್ಲದೇ ಪ್ರತಿಭೆಗಳು ಎಲೆ ಮರೆಯ ಕಾಯಿಗಳಂತಿವೆ.ಪಾಲಕರು ತಮ್ಮ ಮಕ್ಕಳಲ್ಲಿರುವ ಕಲೆಯನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕಿದೆ.ಅಲ್ಲದೇ ವಾಣಿಜ್ಯನಗರಿ ಕೀರ್ತಿಯನ್ನು ಮತ್ತಷ್ಟು ಇಮ್ಮಡಿಗೊಳಿಸಿದ ಆರ್ಯನ್ ಸಾಧನೆಗೆ ಎಲ್ಲೆಡೆಯೂ ಅಭಿನಂದನೆ ಮಹಾಪೂರವೇ ಹರಿದುಬರುತ್ತಿದೆ.
Kshetra Samachara
04/12/2020 03:34 pm