ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮೃತ್ಯು ಜಯಸದ ಮೃತ್ಯುಂಜಯ.. ರೋದನದಲ್ಲಿ ರೋಹಿತನ ಕುಟುಂಬ!

ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ

ಧಾರವಾಡ: ನನ್ನ ಮಗ ಶಾಲೆ ಕಲಿತು ನೌಕರಿ ಮಾಡ್ತಾನೆ.. ನಮ್ಮ ಕಷ್ಟ ಅವನಿಗೆ ಬರುವುದು ಬೇಡ.. ಆತ ನೌಕರಿಗೆ ಹತ್ತಿದ ಮೇಲೆ ನಮ್ಮ ಎಲ್ಲಾ ಕಷ್ಟ ನೀರಿನ ಹಾಗೆ ಪರಿಹಾರ ಆಗುತ್ತವೆ ಅಂತಾ ಆ ತಾಯಿ ಮಗನ ಮೇಲೆ ಬೆಟ್ಟದಷ್ಟು ಆಸೆ ಇಟ್ಟುಕೊಂಡು ಕೂತಿದ್ಲು. ಆದ್ರೆ, ವಿಧಿಯಾಟದ ಮುಂದೆ ಆ ಮಹಾತಾಯಿಯ ಆಸೆಗಳೆಲ್ಲವೂ ನುಚ್ಚುನೂರಾಗಿ ಹೋಗಿವೆ.

ಹೌದು! ನಿನ್ನೆ ಧಾರವಾಡ ತಾಲೂಕಿನ ಕ್ಯಾರಕೊಪ್ಪ ಗ್ರಾಮದಲ್ಲಿ ದುರಂತವೊಂದು ನಡೆದಿದೆ. ಒಂದೇ ವಯಸ್ಸಿನ ಇಬ್ಬರು ಮಕ್ಕಳು ಕೆರೆಯಲ್ಲಿ ಆಕಳು ಮೈ ತೊಳೆಯಲು ಹೋಗಿ ದುರಂತ ಅಂತ್ಯ ಕಂಡಿದ್ದಾರೆ. ಮೃತ್ಯುಂಜಯ ಕಾಮಧೇನು (14) ಹಾಗೂ ರೋಹಿತ್ ಪೂಜಾರ (14) ಎಂಬ ಬಾಲಕರೇ ಈ ರೀತಿ ದುರಂತ ಅಂತ್ಯ ಕಂಡವರು.

ಈ ಕುರಿತ ವಿಶೇಷ ವರದಿ ಇಲ್ಲಿದೆ ಕೇಳಿ.

Edited By : Nagesh Gaonkar
Kshetra Samachara

Kshetra Samachara

30/09/2020 01:14 pm

Cinque Terre

29.09 K

Cinque Terre

1

ಸಂಬಂಧಿತ ಸುದ್ದಿ