ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯಲ್ಲೊಬ್ಬ ಪಕ್ಷಿ ಪ್ರೇಮಿ ಸಲೀಂ ಅಲಿ:ಲವ್ ಬರ್ಡ್ಸ್ ಪೋಷಣೆಗೆ ಮುಂದಾದ ದೇವಾನಂದ್ ಜಗಾಪೂರ

ಹುಬ್ಬಳ್ಳಿ: ಮನೆ ಟೆರಸ್ ಮೇಲೆ ತರಕಾರಿ ಬೆಳೆಯೊದು ಕೃಷಿ ಮಾಡಿರೋದನ್ನ ನೋಡಿದಿರಾ ಆದ್ರೇ ಇಲ್ಲೊಬ್ಬ ವ್ಯಕ್ತಿ ತನ್ನ ಮನೆಯ ಟೆರಸ್ ವಿನೂತನವಾಗಿ ಬಳಕೆ ಮಾಡಿಕೊಂಡಿದ್ದು,ಹಲವಾರು ಜೀವಿಗಳಿಗೆ ಆಶ್ರಯದಾತನಾಗುವ ಮೂಲಕ ತನ್ನ ಜೀವನದ ಸಾರ್ಥಕತೆಯನ್ನು ಕಂಡುಕೊಳ್ಳುತ್ತಿದ್ದಾನೆ. ಯಾರು ಆ ವ್ಯಕ್ತಿ ಅಷ್ಟಕ್ಕೂ ಆತ ಮಾಡಿದ್ದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ..

ನಾವೆಲ್ಲ ಪಕ್ಷಿ ಪ್ರೇಮಿ ಸಲೀಂ ಅಲಿ ಅವರ ಬಗ್ಗೆ ಕೇಳಿದ್ದೇವೆ.ಆದರೇ ನೋಡಿಲ್ಲ.ಪಕ್ಷಿಗಳ ಬಗ್ಗೆ ಪ್ರೇಮವನ್ನು ಮೆರೆಯುವ ಮೂಲಕ ಹುಬ್ಬಳ್ಳಿಯಲ್ಲೊಬ್ಬ ವ್ಯಕ್ತಿ ತನ್ನ ಮನೆಯ ಟೆರಸ್ ಮೇಲೆಯೇ ಪಕ್ಷಿಗಳಿಗೆ ಆಶ್ರಯವನ್ನು ನೀಡುವ ಮೂಲಕ ಐವತ್ತಕ್ಕೂ ಹೆಚ್ಚು ಲವ್ ಬರ್ಡ್ಸ್ ಸಾಕಿದ್ದಾರೆ.ಹೌದು..ಹುಬ್ಬಳ್ಳಿಯ ಬೆಂಗೇರಿಯ ವೆಂಕಟೇಶ್ವರ ಕಾಲೋನಿಯ ನಿವಾಸಿ ದೇವಾನಂದ್ ಜಗಾಪೂರ ಎಂಬುವವರೇ ತಮ್ಮ ಮನೆಯ ಟೆರಸ್‌ನಲ್ಲಿ ಐವತ್ತಕ್ಕೂ ಹೆಚ್ಚೂ ಲವ್ ಬರ್ಡ್ಸ್ ಸಾಕಿದ್ದಾರೆ.ಮೊದಲು ಹವ್ಯಾಸದಿಂದ ನಾಯಿ,ಪಾರಿವಾಳ ಸಾಕುತ್ತಿದ್ದ ಇವರು ಈಗ ಐವತ್ತಕ್ಕೂ ಹೆಚ್ಚು ಲವ್ ಬರ್ಡ್ಸ್ ಸಾಕಿದ್ದಾರೆ.

ಮನೆಯ ಮೇಲ್ಚಾವಣಿಯಲ್ಲಿ ಒಂದು ಶೆಡ್ ನಿರ್ಮಾಣ ಮಾಡಿ ಅವುಗಳಿಗೆ ಅರಣ್ಯದ ಸೊಬಗನ್ನು ಕೂಡ ಅವರೇ ನಿರ್ಮಾಣ ಮಾಡಿದ್ದು,ನೋಡುಗರಿಗೆ ನಿಜಕ್ಕೂ ಸಂತಸವನ್ನುಂಟು ಮಾಡುವಂತೆ ಮಾಡಿದ್ದಾರೆ.ಇನ್ನೂ ಯಾರೇ ಸಾರ್ವಜನಿಕರು ಬಂದರೂ ಕೂಡ ಈ ಲವ್ ಬರ್ಡ್ಸ್ ನೋಡಿ ಆನಂದಿಸಬಹುದು ಅಂತಾರೇ ದೇವಾನಂದ್ ಜಗಾಪೂರ..

ಇನ್ನೂ ದೇವಾನಂದ್ ಜಗಾಪೂರ ಅವರು ಮಾತ್ರವಲ್ಲದೆ ಮನೆಯ ಮಂದಿ ಕೂಡ ಸಾಥ್ ನೀಡಿದ್ದು,ಮಕ್ಕಳು ಮೊಮ್ಮಕ್ಕಳು ಕೂಡ ಈ ಲವ್ ಬರ್ಡ್ಸ್ ಪೋಷಣೆಗೆ ಕೈ ಜೋಡಿಸಿರುವುದು ವಿಶೇಷವಾಗಿದೆ. ಮಕ್ಕಳಿಗೆ ಲವ್ ಬರ್ಡ್ಸ್ ಅಂದ್ರೇ ತುಂಬಾ ಅಚ್ಚು ಮೆಚ್ಚು ಅಜ್ಜನ ಕಾರ್ಯಕ್ಕೆ ಮೊಮ್ಮಕ್ಕಳು ಕೂಡ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಹುಬ್ಬಳ್ಳಿಯಲ್ಲೊಬ್ಬ ಪಕ್ಷಿ ಪ್ರೇಮಿ ಸಲೀಂ ಅಲಿ ಸದ್ದಿಲ್ಲದೆ ಇಂತಹ ಕಾರ್ಯ ಮಾಡುತ್ತಿದ್ದು,ಮುಂಬರುವ ದಿನಗಳಲ್ಲಿ ನೂರು ಇನ್ನೂರಕ್ಕೂ ಹೆಚ್ಚು ಪಕ್ಷಿಗಳ ಪಾಲನೆ ಪೋಷಣೆ ಗುರಿಯನ್ನು ಹೊಂದಿದ್ದಾರೆ.ಅಲ್ಲದೇ ಸ್ವತಃ ಅವರೇ ಸಮಾಜಕ್ಕೆ ಸಂದೇಶ ನೀಡುತ್ತಿದ್ದು,ಇಂತಹ ಹವ್ಯಾಸದಿಂದ ಮಾನಸಿಕ ಒತ್ತಡ ಕಡಿಮೆಯಾಗಿ ಆರೋಗ್ಯ ವೃದ್ಧಿಸುತ್ತದೆ ಎಂದು...

Edited By : Nagesh Gaonkar
Kshetra Samachara

Kshetra Samachara

24/12/2020 06:32 pm

Cinque Terre

74.39 K

Cinque Terre

9

ಸಂಬಂಧಿತ ಸುದ್ದಿ