ಹುಬ್ಬಳ್ಳಿ: ಬೆಂಗಳೂರಿನ ಚಿತ್ರಕಲಾ ಪರಿಷತ್ ದಲ್ಲಿ ನವಂಬರ 27 ರಿಂದ 29 ರವರೆಗೂ ಮೂರು ದಿನಗಳ ಕಾಲ ಕರ್ನಾಟಕ ರಾಜ್ಯ ಪತ್ರಿಕಾ ಛಾಯಾಗ್ರಾಹಕರ ಸಂಘ ಏರ್ಪಡಿಸಿದ್ದ ಕೋವಿಡ್ 19 ಛಾಯಾಚಿತ್ರ ಪ್ರದರ್ಶನದಲ್ಲಿ ಹುಬ್ಬಳ್ಳಿಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಕಿರಣ್ ಬಾಕಳೆ ಮತ್ತು ಅವರ ಮಕ್ಕಳಾದ ವಿನಾಯಕ್ ಮತ್ತು ವಿಜಯ್ ಅವರು ತೆಗೆದ ಪೋಟೋಗಳು ಪ್ರದರ್ಶನಗೊಂಡಿವೆ.
ಹೌದು..ಇತ್ತಿಚೆಗೆ ನಿಧನರಾದ ಸುರೇಶ್ ಅಂಗಡಿ ಅವರು ಕೊರೋನಾ ವಾರಿಯರ್ಸ್‌ಗೆ ನಮಸ್ಕರಿಸುತ್ತಿರುವುದು, ಕೂಲಿ ಕಾರ್ಮಿಕರ ಫೋಟೋ, ಚಿಟಗುಪ್ಪಿ ಆಸ್ಪತ್ರೆಯಲ್ಲಿ ಬಾಣಂತಿಯರು Covid ಟೆಸ್ಟ್ ಮಾಡುತ್ತಿರುವುದು, ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್ ನಲ್ಲಿ ಹೊರಬಂದಂತೆ ಸಾರ್ವಜನಿಕರಿಗೆ ಪೊಲೀಸರು ರಸ್ತೆಯಲ್ಲಿ ಬೈಟಕ್ ತೆಗೆಸುತ್ತಿರುವುದು,ರೈಲು ನಿಲ್ದಾಣದಲ್ಲಿ ತಪಾಸಣೆ ಚಿತ್ರ ಮಹಿಳೆಯರು ಅಂತರ ಕಾಯುವುದು ಹೀಗೆ ಎಂಟು ಫೋಟೋಗಳು ಪ್ರದರ್ಶನಗೊಂಡಿವೆ.
ಇನ್ನೂ ಛಾಯಾಚಿತ್ರ ಪ್ರದರ್ಶನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಚಿತ್ರ ನಟ ಟೆನ್ನಿಸ್ ಕೃಷ್ಣ, ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ್ ತಗಡೂರು,ರವಿ ಹೆಗಡೆ ವೀಕ್ಷಣೆ ಮಾಡಿ ಅಭಿನಂದನೆ ಸಲ್ಲಿಸಿದರು.
Kshetra Samachara
28/11/2020 04:47 pm