ಹುಬ್ಬಳ್ಳಿ: ಅವನು ಹಳ್ಳಿ ಹುಡುಗ. ಗ್ರ್ಯಾಜುಯೇಷನ್ ಮುಗಿಸಿದ್ದ. ಬಾಡಿ ಬಿಲ್ಡಿಂಗ್ ಅಂದ್ರೇ, ಸಿಕ್ಕಾಪಟ್ಟೆ ಹುಚ್ಚು. ದೇಹದಾರ್ಡ್ಯದಲ್ಲಿ ಏನಾದರೂ ಸಾಧಿಸಬೇಕು ಅಂತಾ ಕನಸು ಕಂಡ ಯುವಕನ ಸಾಧನೆ ಎಲ್ಲರ ಹುಬ್ಬೇರಿಸುಂತಿದೆ. ಖಡಕ್ ರೊಟ್ಟಿ ತಿಂದು, ಜಗಜಟ್ಟಿಗಳನ್ನು ಮೀರಿಸುವಂತೆ ಬೆಳೆದಿರುವ ಆ ಯುವಕನ ಯಶೋಗಾಥೆ ನೋಡಿದರೇ ಕರಳುಹಿಂಡುತ್ತೆ..
ಬಾಡಿ ಬಿಲ್ಡಿಂಗ್ ಅನ್ನೋದು ನೋಡೋಕೆ ಎಷ್ಟು ಚಂದ ಮೈಮಾಟ ಕಾಣುತ್ತೋ ಅಷ್ಟೇ ಅದರ ಹಿಂದೆ ಕಷ್ಟಾನೂ ಇರುತ್ತದೆ. ಧಾರಾವಾಡದ ಜಿಲ್ಲೆಯ ಹುಬ್ಬಳ್ಳಿಯ ವಿನಾಯಕ ಮಂಟೂರು ಈ ಯುವಕ ಚಿಕ್ಕ ವಯಸ್ಸಿನಲ್ಲೆ ಎಲ್ಲರ ಹುಬ್ಬೇರಿಸುವಂತೆ ಕಟ್ಟುಮಸ್ತಾದ ದೇಹಸಿರಿ ಸಂಪಾದಿಸಿದ್ದಾನೆ.
ಕುಸುಗಲ್ ಗ್ರಾಮದ ಈ ಪೋರ ಕಾಲೇಜ್ ನಲ್ಲಿ ವಿದ್ಯಾರ್ಥಿ ಇದ್ದಾಗಲೇ,ಬಾಡಿ ಬಿಲ್ಡರ್ ಆಗ್ಬೇಕು ಅಂತಾ ಕನಸುಹೋತ್ತು ನನಸು ಮಾಡಿದವನು. ಇವನ ಹದಿನೆಂಟು ವಯಸ್ಸಿನಲ್ಲೆ ರಾಷ್ಟ್ರಮಟ್ಟದಲ್ಲಿ ರಾಜ್ಯದ ಕೀರ್ತಿ ತಂದವನು. ಇಲ್ಲಿವರೆಗೂ ಹದಿನೈದು ವಿವಿಧ ದೇಹದಾಡ್ಯ ಸ್ಪರ್ದೆಯಲ್ಲಿ ಭಾಗವಹಿಸಿದ ಅವಿನಾಶ್,ಕಳೆದ ವರ್ಷ ಜೂನಿಯರ್ ನ್ಯಾಷನಲ್ ನಲ್ಲಿ ಭಾಗಹಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾನೆ..
ಅವಿನಾಶ ಮಂಟೂರ್,ಬಾಡಿ ಬಿಲ್ಡಂಗ್‌ಗಾಗಿ ವಿದ್ಯಾಬ್ಯಾಸ ತ್ಯಾಗ ಮಾಡಿದ್ದಾನೆ. ಮುಂದಿನ ಸಿನಿಯರ್ ವಿಭಾಗದ ಮಿಸ್ಟರ್ ಇಂಡಿಯಾದಲ್ಲಿ ಭಾಗವಹಿಸಲು ಕಸರತ್ತು ನಡೆಸಿದ್ದಾನೆ.
ಮನೆಯಲ್ಲಿ ಇವನಿಗೆ ಪ್ರೋತ್ಸಾಹ ನೀಡಲು ಕುಟುಂಬಸ್ಥರು ಸ್ಥಿತಿವಂತರಿಲ್ಲಾ. ಹೀಗಾಗಿ ಯಾವುದೇ ಕಾರಣಕ್ಕೂ ಸ್ಪರ್ಧೆಯನ್ನು ಮಿಸ್ ಮಾಡಿಕೋಬಾರದು ಅಂತಾ ಹುಬ್ಬಳ್ಳಿಯ ತಕ್ಕಡಿ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದಾನೆ.
ತಿಂಗಳಿಗೆ 8ಸಾವಿರ ರೂಪಾಯಿ ಸಂಪಾದನೆ ಮಾಡುತ್ತಿರುವ ಅವಿನಾಶ್‌ಗೆ ಬಾಡಿ ಬಿಲ್ಡಿಂಗ್‌ಗಾಗಿ ಬೇಕಾಗುವ ಆಹಾರಕ್ಕೂ ಸಂಬಳ ಸಾಕಾಗ್ತಿಲ್ಲಾ. ಪ್ರೋತ್ಸಾಹ ಸಿಕ್ರೇ ಇಂಟರ್‌ನ್ಯಾಷನಲ್ ಕಾಂಪಿಟೇಶನ್‌ವರೆಗೂ ಭಾಗವಹಿಸುವ ಕನಸು ಕಾಣುತ್ತಿದ್ದಾನೆ..
ಕಳೆದ ವರ್ಷ ನಡೆದ ರಾಷ್ಟ್ರೀಯ ಜೂನಿಯರ್ಸ ವಿಭಾಗದಲ್ಲಿ ಭಾಗವಹಿಸಿ 3ನೇ ರ್ಯಾಂಕ್ ಅವಿನಾಶ್ ಗಳಿಸಿದ್ದಾನೆ. ಯಾರ ಪ್ರೋತ್ಸಾಹ,ಹಣದ ಸಹಾಯಯಿಲ್ಲದೇ,ರೊಟ್ಟಿ ಚಟ್ನಿ ತಿಂದೇ,ಈ ಯುವಕ ಈ ಗಟ್ಟಿ ಕಾಯ ತಯಾರು ಮಾಡಿಕೊಂಡಿದ್ದಾನೆ. ಇನ್ನೂ ದಿನ ಕುಸುಗಲ್‌ನಿಂದ ಬಂದು ಜಿಮ್‌ನಲ್ಲಿ ಕರಸತ್ತುಗಳನ್ನು ಮಾಡ್ತಾ,ತಯಾರಿಯೇನೋ ನಡೆಸಿದ್ದಾನೆ.
ಆದರೇ,ನ್ಯಾಶನಲ್ ಸಲುವಾಗಿ ಆಹಾರ, ಔಷಧಿಗಳಗಾಗಿ ಸಹಾಯದ ಅವಶ್ಯಕತೆಯಿದೆ. ಅವಿನಾಶ್‌ಗೆ ಸ್ವಲ್ಪ ಪೂಶಪ್ ಸಿಕ್ಕರೇ ಮತ್ತೊಂದು ಮೇಡಲ್ ತರೋದಂತೂ ಗ್ಯಾರಂಟಿ.
Kshetra Samachara
22/11/2020 04:59 pm