ಧಾರವಾಡ: ಭಾನುವಾರ ಬಂದ್ರೆ ಸಾಕು ವೀಕೆಂಡ್ ಎಂದು ಅಲ್ಲಿ ಇಲ್ಲಿ ಸುತ್ತಾಡೋಕೆ ಹೋಗುವವರೇ ಹೆಚ್ಚು. ಆದ್ರೆ ಇನ್ನೂ ಕೆಲವರು ಮನೆಯಲ್ಲಿದ್ದುಕೊಂಡೇ ವಿಶೇಷ ರುಚಿ ರುಚಿಯ ಖಾದ್ಯಗಳನ್ನು ಮಾಡಿ ಸವಿಯುತ್ತಾರೆ.
ಈ ಭಾನುವಾರ ನಾವು ನಿಮಗೆ ಸಕ್ಕರೆ ಕಾಯಿಲೆ ಇರುವವರು ಹಾಗೂ ಆರೋಗ್ಯಕ್ಕೆ ಹಿತಕರವಾದ ಖಾದ್ಯವೊಂದನ್ನು ಮಾಡುವ ಬಗ್ಗೆ ತೋರಿಸುತ್ತೇವೆ ನೋಡಿ.
ಇವರು ಧಾರವಾಡದ ಕೆಲಗೇರಿಯ ನಿವಾಸಿ ಆಶಾ ರವಿ. ಸಕ್ಕರೆ ಕಾಯಿಲೆ ಇರುವವರು ಹೆಚ್ಚು ತಿನ್ನಬಹುದಾದ ಹಾಗೂ ಆರೋಗ್ಯಕ್ಕೆ ಹಿತಕರವಾದ ರಾಗಿ ಥಾಲಿಪಟ್ಟನ್ನು ಇವರು ಮಾಡುತ್ತಾರೆ.
ಈ ರಾಗಿ ಥಾಲುಪಟ್ಟು ಮಾಡಲು ಬೇಕಾಗುವ ಸಾಮಗ್ರಿಗಳು ಒಂದ ಬೌಲ್ ರಾಗಿ ಹಿಟ್ಟು, ಅರ್ಧ ಬೌಲ್ ಹೆಚ್ಚಿಟ್ಟ ಈರುಳ್ಳಿ, ಸ್ವಲ್ಪ ಕೋತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು (ಕರಿಬೇವು, ಶುಂಟಿ, ಹಸಿಮೆಣಸಿನಕಾಯಿ, ಬಳ್ಳೊಳ್ಳಿ ಪೇಸ್ಟ್ ಮಾಡುವುದು) ಎಲ್ಲವನ್ನೂ ಮಿಶ್ರಣ ಮಾಡಿ...
ಒಬ್ಬೊಬ್ಬರ ಅನುಕೂಲಕ್ಕೆ ತಕ್ಕಂತೆ ಪ್ಲಾಸ್ಟಿಕ್ ಪೇಪರ್ ಮೇಲೆ ತಟ್ಟಬಹುದು, ಇಲ್ಲವೇ ಹಂಚಿನ ಮೇಲೆ ನೀರಿನ ಸಹಾಯದಿಂದ ತಟ್ಟಬಹುದು. ಕೇವಲ 15 ನಿಮಿಷದಲ್ಲಿ ಆರೋಗ್ಯಕ್ಕೆ ಪೂರಕವಾದ ರಾಗಿ ಥಾಲಿಪಟ್ಟು ರೆಡಿಯಾಗುತ್ತದೆ.
ಈ ಥಾಲಿಪಟ್ಟಿನ ಜೊತೆಗೆ ಕೊಬ್ಬರಿ ಚಟ್ನಿ ಇದ್ದರಂತೂ ಇನ್ನೂ ರುಚಿಕರ ಖಾದ್ಯ ಇದಾಗುತ್ತದೆ. ಹಾಗಾದ್ರೆ ತಡ ಏಕೆ ನೀವು ಒಂದು ಸಾರಿ ಪ್ರಯತ್ನ ಮಾಡೇಬಿಡಿ.
Kshetra Samachara
22/11/2020 04:12 pm