ಕಲಘಟಗಿ:ತಾಲೂಕಿನಹಿಂಡಸಗೇರಿ ಗ್ರಾಮದ ಹತ್ತಿರದ ಬೇಡ್ತಿ ಹಳ್ಳದ ಬ್ರಿಜ್ ಹತ್ತಿರ ಕುರಿಗಾಯಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಮಂಗಳವಾರ ದಾಖಲಾಗಿದೆ.
ಮೃತಳನ್ನು ಗೋಕಾಕ ತಾಲೂಕಿನ ಧರ್ಮಟ್ಟಿ ಗ್ರಾಮದ ಸುವರ್ಣ ಗಂಡ ಬಸಪ್ಪ ಮಾಳಂಗಿ (26) ಎಂದು ಗುರುತಿಸಲಾಗಿದೆ.ತನಗಿದ್ದ ವೀಪರಿತ ಹೊಟ್ಟೆ ನೋವು ತಾಳಲಾರದೆ ಅಂಕಲಿ ಮರಕ್ಕೆ ತಾನು ಧರಿಸಿಕೊಂಡಿದ್ದ ಪತ್ತಲದಿಂದ ನೇಣು ಹಾಕಿಕೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.
ಇವಳ ಸಾವಿನಲ್ಲಿ ಯಾವುದೇ ಸಂಶವಿಲ್ಲ ಎಂದು ಮೃತಳ ತಾಯಿ ಕಲಘಟಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.ಸಿಪಿಐ ವಿಜಯ ಬಿರಾದಾರ ಸ್ಥಳಕ್ಕೆ ಬೇಟಿ ನೀಡಿ ತನಿಖೆ ನಡೆಸಿದ್ದಾರೆ.
Kshetra Samachara
17/11/2020 09:57 pm