ಹುಬ್ಬಳ್ಳಿ- ಕರ್ನಾಟಕದಲ್ಲಿರುವ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ, ಒತ್ತಾಯಿಸಿ ಮಂಜುನಾಥ ತಿಪ್ಪಣ್ಣ ಬದ್ರಶೆಟ್ಟಿ ಎಂಬ ಯುವಕ, ಪಾದಯಾತ್ರೆ ಮೂಲಕ ಹುಬ್ಬಳ್ಳಿಗೆ ಬಂದಿರುವ ಹಿನ್ನೆಲೆ ಇಂದು ವಿವಿಧ ಸಂಘಟನೆ ಕಾರ್ಯಕರ್ತರು ಸನ್ಮಾನ ಮಾಡಿದರು...
ಮೂಲತಃ ಶಿಗ್ಗಾಂವ ತಾಲ್ಲೂಕಿನ ಮುಗಳಿ ಗ್ರಾಮದವರಾದ ಮಂಜುನಾಥ ಬದ್ರಶೆಟ್ಟಿ, ಸದ್ಯ ಆಂದ್ರಪ್ರದೇಶದ ಕಾಂಚನಪಲ್ಲಿ ಜಿಲ್ಲೆಯಲ್ಲಿ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ. ಅಲ್ಲಿರುವ ಜನತೆಗೆ, ಆ ಸರಕಾರ ನೀಡುತ್ತಿರುವ ಸೌಲಭ್ಯ ಹಾಗೂ ಆದ್ಯತೆ ನಮ್ಮ
ಕರ್ನಾಟಕದಲ್ಲಿಯು ಸಹ, ಕನ್ನಡಿಗರಿಗೆ ಖಾಸಗಿ ಕಂಪನಿಗಳಲ್ಲಿ ಪ್ರಥಮ ಪ್ರಾಶಸ್ತ್ಯ ಸೀಗಬೇಕು, ಮತ್ತು ರಾಜ್ಯದ ಸುತ್ತಲೂ ಇರುವ ಗಡಿ ಸಮಸ್ಯೆಗಳನ್ನು ಬಗೆಹರಿಸಬೇಕು, ಮತ್ತು ಪ್ರತಿ ತಾಲ್ಲೂಕಿನಲ್ಲಿ ತಾಯಿ ಭುವನೇಶ್ವರಿ ಮಂದಿರವನ್ನು ನಿರ್ಮಾಣ ಮಾಡಬೇಕು, ಎಂಬ ಉದ್ದೇಶ ಹೊತ್ತ ಈತ, ಆಂದ್ರ ಪ್ರದೇಶದ ಕಾಂಚನಪಲ್ಲಿಯಿಂದ ಮಹಾರಾಷ್ಟ್ರದ ಕಾಗಲ್ ವರೆಗೂ ಪಾದಯಾತ್ರೆ ಮೂಲಕ ಹೋರಾಟ ಮಾಡುತ್ತಿದ್ದಾನೆ.
ಅದರಂತೆ ಅಕ್ಟೋಬರ್25 ರಿಂದ ಪಾದಯಾತ್ರೆ ಮೂಲಕ, ಇಂದು ಹುಬ್ಬಳ್ಳಿಗೆ ಬಂದಿದ್ದ ಮಂಜುನಾಥ ಬದ್ರಶೆಟ್ಟಿ ಅವರಿಗೆ, ವಿವಿಧ ಸಂಘಟನೆಗಳು ಹಾಗೂ ಬಿಜೆಪಿ ಮಹಿಳಾ ಕಾರ್ಯಕರ್ತರು, ಸಂಗೊಳ್ಳಿ ರಾಯಣ್ಣ ಸರ್ಕಲ್ ನಲ್ಲಿ ಸನ್ಮಾನ ಮಾಡಿ ಅಭಿನಂದನೆ ಸಲ್ಲಿಸಿದರು, ಆದಷ್ಟು ಬೇಗ ನಿಮ್ಮ ಹೋರಾಟದ ಪ್ರತಿಫಲ ಸಿಗಲೇಂದು ಹಾರೈಸಿದರು...
Kshetra Samachara
16/11/2020 07:58 pm