ಕುಂದಗೋಳ : ಈ ಕೊರೊನಾ ಮತ್ತು ಅತಿವೃಷ್ಟಿ ಹಾವಳಿ ಒಳಗ ಒಂದೊಂದ ಹಬ್ಬಗಳು ಕಳೆದು ಹೋಗ್ತಾ ಇವೆ ನೋಡಿ, ಗಣೇಶ್ ಚತುರ್ಥಿ, ಮಹಾನವಮಿ, ಸೀಗೆ ಹುಣ್ಣಿಮೆ, ಈದ್ ಮಿಲಾದ್, ಬಕ್ರೀದ್, ಮೊಹರಂ ಸೇರಿದಂತೆ ಈ ವರ್ಷದ ದೀಪಾವಳಿಯೂ ಸಹ ಅಷ್ಟೇನೂ ಹುಮ್ಮಸ್ಸನ್ನು ಹೊಂದಿಲ್ಲ, ಈ ಕಾರಣ ಕುಂದಗೋಳ ಮಾರ್ಕೇಟ್ ಒಳಗೆ ಜನಾ ಹಬ್ಬದ ಸಂತಿಗಿಂತ ದಿನ ನಿತ್ಯದ ತರಕಾರಿ ಕೊಳ್ಳಲಿಕ್ಕೆ ಜಾಸ್ತಿ ಹೊರಟಾರ.
ಈ ಕೊರೊನಾ ಒಳಗೆ ಅದೆಷ್ಟೋ ಉದ್ಯೋಗಸ್ಥರು ಕೆಲ್ಸಾ ಕಳೆದುಕೊಂಡು ಮನೇಲಿ ಕೂತ್ರು, ಇನ್ನ ಅದೆಷ್ಟೋ ರೈತರು ಬೆಳೆದ ಬೆಳೆ ಕಳಕೊಂಡು ಕಷ್ಟದಲ್ಲಿದ್ದು ಈ ಹತ್ತಿ, ಶೇಂಗಾ, ಇನ್ನು ಮಾರುಕಟ್ಟೆ ತಲುಪಿಲ್ಲ, ವ್ಯಾಪಾರಿ ಉದ್ಯಮಿಗಳು ಲಾಸ್ ಆದ್ರೂ, ಹೀಗಾಗಿ ಜನ ಮತ್ತು ರೈತರು ಕೈಯಲ್ಲಿ ಕಾಂಚಾಣವೇ ಇಲ್ಲದ ಸಂಬಂಧ ಮಾರುಕಟ್ಟೆ ಪೂರ್ತಿ ಬಣ ಬಣ ಆಗಿದೆ.
ಈಗಾಗಲೇ ದೀಪಾವಳಿ ಹಬ್ಬದ ಮುನ್ಸೂಚನೆಯಂತೆ ವಿವಿಧ ಹಣ್ಣು, ಅಲಂಕಾರದ ಆಕಾಶದ ಬುಟ್ಟಿಗಳು, ಹಣತೆಗಳು, ಬಣ್ಣ ಬಣ್ಣದ ರಂಗೋಲಿ, ಸೇರಿದಂತೆ ವಿವಿಧ ಹಬ್ಬದ ಅಗತ್ಯ ವಸ್ತುಗಳು ವರ್ತಕರ ಅಂಗಡಿ ತಲುಪಿದ್ದು, ಈಗ ಬಣ ಬಣ ಎನ್ನುತ್ತಿರುವ ಮಾರುಕಟ್ಟೆ ಹಬ್ಬದ ದಿನದಲ್ಲಾದರೂ ವಿಜೃಂಭಿಸುತ್ತಾ ನೋಡೋಣ.
Kshetra Samachara
14/11/2020 04:35 pm