ಹುಬ್ಬಳ್ಳಿ : ಕಾಯಕವೇ ಕೈಲಾಸ ಎಂಬ ವಿಶ್ವಗುರು ಬಸವಣ್ಣನವರ ಮಾತಿನಂತೆ ಇಲ್ಲೊಬ್ಬರು ಕಾಯಕದಲ್ಲೇ ಖುಷಿ ಕಂಡು ಹಾಡುತ್ತಾ, ನಲಿಯುತ್ತಾ, ವಚನ ಸಾರ ಹೇಳುತ್ತಾ ತಮ್ಮ ದೈನಂದಿನ ದುಡಿಮೆಯಲ್ಲೇ ದೇವರನ್ನು ಕಂಡಿದ್ದು ವೃತ್ತಿ ಪ್ರೀತಿ ಮೆರೆದಿದ್ದಾರೆ.
ಹೌದು ! ಹುಬ್ಬಳ್ಳಿಯ ತಾರಿಹಾಳದ ಐಇಎಮಎಸ್ ಕಾಲೇಜಿನಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿರುವ ಸರಿ ಸುಮಾರು 60 ರ ಮೇಲ್ಪಟ್ಟ ಈ ವೃದ್ಧ ಭರಮರೆಡ್ಡಿ ಅಣ್ಣಿಗೇರಿ ಮೂಲತಃ ಮೊರಬದವರಾದ್ರೂ ಹೊತ್ತೇರುವ ಮೊದ್ಲೇ ಹುಬ್ಬಳ್ಳಿಯ ಕಾಲೇಜಿನಲ್ಲಿ ಕಾಯಕ ಮಾಡುತ್ತಾ ಹಸನ್ಮುಖಿಯಾಗಿದ್ದಾರೆ.
ನಮ್ಗೆ ಕೆಲಸಗಳೇ ಇಲ್ಲಾ, ಇಂಜನೀಯರ್ ಮಾಡಿದೆ ಕೆಲ್ಸಾ ಸಿಕ್ಕಿಲ್ಲಾ, ಸಿಕ್ಕಿರೋ ಕೆಲ್ಸಾ ಒತ್ತಡ ಆಯ್ತು ಅಂತಾ ಸಾವಿಗೆ ಶರಣಾಗೋ ಯುವಕರು ದುಡಿಯುವ ವಯಸ್ಸಲ್ಲಿ ಮೋಜಿಗಾಗಿ ಕಳ್ಳತನಕ್ಕೆ ಮುಂದಾಗೋ ಅದೆಷ್ಟೋ ಜನರಿಗೆ ಇವರು ನಿತ್ಯ ಯಾರಿರಲಿ ಬಿಡಲಿ ತಮ್ಮ ಹಾಡಿನ ಮೂಲಕ ತಮ್ಮ ಕೆಲಸ ನಿರ್ವಹಿಸುವ ಶೈಲಿ ಯುವಕರಿಗೆ ಉತ್ಸಾಹ ತಂಬದಿರಲು ಸಾಧ್ಯವಿಲ್ಲ.
Kshetra Samachara
10/11/2020 06:03 pm