ಪಬ್ಲಿಕ್ ನೆಕ್ಸ್ಟ್ ವಿಶೇಷ, ಮಲ್ಲಿಕಾರ್ಜುನ ಪುರದನಗೌಡರ.
ಕಲಘಟಗಿ: ಕುಂಬಾರನಿಗೆ ವರ್ಷ ದೊಣ್ಣೆಗೆ ನಿಮಿಷ ಎಂಬ ಗಾದೆ ಮಾತಿನಂತೆ ಕುಂಬಾರಿಕೆ ಆಧುನಿಕತೆಯ ಭರಾಟೆಯಲ್ಲಿ ಸಿಲುಕಿ ದೀಪಗಳ ಹಬ್ಬ ದೀಪಾವಳಿಗೆ ಮಣ್ಣಿನ ದೀಪಗಳಿಗೆ ಬೇಡಿಕೆ ಕಡಿಮೆಯಾಗಿ ಕುಂಬಾರಿಕೆ ಮಂಕಾಗಿದೆ.
ಕಲಘಟಗಿ ಪಟ್ಟಣದಲ್ಲಿ ಕುಂಬಾರಿಕೆ ವೃತ್ತಿಯನ್ನು ಅವಲಂಬಿಸಿದ ಕುಟುಂಬಗಳು ಸಂಕಷ್ಟದಲ್ಲಿ ಇವೆ.ಹಿಂದೆ ಕುಂಬಾರ ತಯಾರಿಸಿದ ವಸ್ತುಗಳಿಗೆ ಬಹು ಬೇಡಿಕೆ ಇತ್ತು. ಆದರೆ ಅಲ್ಯೂಮಿನಿಯಂ, ಸ್ಟೀಲ್, ಪ್ಲಾಸ್ಟಿಕ್ ವಸ್ತುಗಳ, ಪಾತ್ರೆಗಳ ಹಾವಳಿಯಿಂದ ಮಡಿಕೆ, ಕುಡಿಕೆ, ಮಣ್ಣಿನಒಲೆ ಹಾಗೂ ದೀಪಗಳಿಗೆ ಬೇಡಿಕೆ ಕಡಿಮೆಯಾಗಿದೆ.
ಪಟ್ಟಣದಲ್ಲಿ ಕುಂಬಾರ ಓಣಿಯಲ್ಲಿ ಹಲವು ಕುಟುಂಬಗಳು ಕುಂಬಾರಿಕೆ ಅವಲಂಬಿಸಿ ಜೀವನ ನಡೆಸುತ್ತಿವೆ. ಫ್ಯಾಕ್ಟರಿಗಳಲ್ಲಿ ತಯಾರಿಸಿದ ವಸ್ತುಗಳಿಂದ ಆನುವಂಶಿಯವಾಗಿರುವ ಕುಂಬಾರಿಕೆಯ ಮೇಲೆ ಕರಿ ಛಾಯೆ ಮೂಡುವಂತೆ ಮಾಡಿದೆ.ಕೆಲವರು ಇದೇ ಕಸಬು ಮುಂದುವರೆಸಿದರೆ, ಇನ್ನು ಕೆಲವರು ಈ ಕಸಬು ತೊರೆದು ಬೇರೆ ವೃತ್ತಿಯತ್ತವಾಲುತ್ತಿದ್ದಾರೆ
ಕುಂಬಾರಿಕೆ ಮಾಡಲು ಬೇಕಾದ ಮಣ್ಣು,ಕಟ್ಟಿಗೆ ಸಿಗದೇ ಕುಂಬಾರಿಕೆ ಕಷ್ಟವಾಗುತ್ತಿದೆ,ಆದರೂ ಜೀವನೋಪಾಯಕ್ಕಾಗಿ ಕಷ್ಟದಲ್ಲಿಯೇ ಕುಂಬಾರಿಕೆ ಮುಂದುವರೆಸಿರುವುದಾಗಿ ರಾಜಪ್ಪ ಕೊಟಗುಣಸಿ ಹಾಗೂ ನೀಲವ್ವ ಪಬ್ಲಿಕ್ ನೆಕ್ಸ್ಟ್ ಗೆ ತಮ್ಮ ಸಂಕಷ್ಟ ತಿಳಿಸಿದರು.
ಲಾಕ್ ಡೌನ್ ಮತ್ತು ಕರೋನಾದಿಂದ ಜೀವನೋಪಾಯಕ್ಕಾಗಿ ಕಸುಬನ್ನಾಗಿ ಮಾಡಿಕೊಂಡಿರುವ ಕುಂಬಾರ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ದೀಪಾವಳಿ ಹಬ್ಬಕ್ಕೆ ತಯಾರಿಸಲಾದ ದೀಪಗಳು ಹುಬ್ಬಳ್ಳಿ, ಧಾರವಾಡ ಹಾಗೂ ಕಾರವಾರದಲ್ಲಿಯೂ ಬೇಡಿಕೆ ಹಾಗೂ ಬೆಲೆಯೂ ಕಡಿಮೆಯಾಗಿದೆ. ಕುಂಬಾರಿಕೆಯನ್ನೇ ನೆಚ್ಚಿಕೊಂಡಿರುವ ಕುಟುಂಬಗಳಿಗೆ ಸರಕಾರ ನೆರವು ನೀಡಬೇಕಿದೆ.
Kshetra Samachara
09/11/2020 05:19 pm