ಕುಂದಗೋಳ: ದುಡಿಯುವ ಛಲ, ಸಾಧಿಸುವ ಹಂಬಲ, ಎಲ್ಲರಿಗಿಂತ ವಿಭಿನ್ನವಾಗಿ ಯೋಚಿಸುವ ಆಲೋಚನೆಯುಳ್ಳ ರೈತರಿಗೆ ಕೃಷಿ ಕ್ಷೇತ್ರ ಉತ್ತಮ ಉಡುಗೊರೆ ನೀಡಿದೆ.
ಒಣ ಬೇಸಾಯದ ಭೂಮಿಯಲ್ಲೇ ಕೃಷಿ ಅನುಸರಿಸುತ್ತಿದ್ದ ರೈತರಿಗೆ ದೇಶಪಾಂಡೆ ಫೌಂಡೇಶನ್ ಕೃಷಿಹೊಂಡದ ಉಡುಗೂರೆ ನೀಡಿ ಕಪ್ಪು ನೆಲದಲ್ಲೂ ಹೂ ಅರಳುವಂತೆ ಮಾಡಿ ಮೀನು ಸಾಕಾಣಿಕೆ, ತರಕಾರಿ ಬೆಳೆ ಬೆಳೆಯುವ ಧೈರ್ಯ, ಆತ್ಮವಿಶ್ವಾಸ ಕೊಟ್ಟಿದೆ.
ಇಂತಹ ಆತ್ಮವಿಶ್ವಾಸದ ಮೂಲಕ ರಾಮಚಂದ್ರ ಮಾರುತಿ ದೊಡ್ಡಮನಿ ಉರ್ಫ್ ಬೋವಿ ಎಂಬ ರೈತ ಮೆಟ್ರಿಕ್ ಶಿಕ್ಷಣ ಕಲಿತು ಭೂತಾಯಿ ಬೇಸಾಯದಲ್ಲಿ ವಿರಾಜಮಾನನಾಗಿ ವಾರ್ಷಿಕ 3 ಲಕ್ಷದ ಆದಾಯದ ಸನ್ಮಾರ್ಗ ಕಂಡಿದ್ದಾರೆ.
ತಮ್ಮ 2 ಎಕರೆ 1 ಗುಂಟೆ ಜಮೀನಿನಲ್ಲಿ 100/100 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡ ರೈತ ರಾಮಚಂದ್ರ ಪ್ರಸಕ್ತ ವರ್ಷ ಸೋಯಾಬಿನ್, ಶೇಂಗಾ, ಚೆಂಡು ಹೂ, ಗುರುಳ್ಳು, ಉದ್ದು, ಹೆಸರು, ಜೋಳ ಸೇರಿ ಮೀನು ಸಾಕಾಣಿಕೆ ಆರಂಭಿಸಿದ್ದಾರೆ.
ಕೃಷಿಯಲ್ಲಿ ಅದು ಒಣಭೂಮಿಯಲ್ಲಿ ದೇಶಪಾಂಡೆ ಫೌಂಡೇಶನ್ ಕೃಷಿಹೊಂಡ ಮಹತ್ತರ ಬದಲಾವಣೆ ನೀಡಿ ಹೊಸ ಹೊಸ ಪ್ರಯೋಗಕ್ಕೆ ಸಾಕ್ಷಿಯಾಗಿ ಅದೆಷ್ಟೋ ರೈತರನ್ನು ಉದ್ಧರಿಸುತ್ತಿದ್ದು, ಆ ಪೈಕಿ ರಾಮಚಂದ್ರ ಸಹ ಒಬ್ಬರಾಗಿ ಕೃಷಿಯಲ್ಲಿ ಖುಷಿ ಕಂಡಿದ್ದಾರೆ.
ಒಟ್ಟಿನಲ್ಲಿ ಕೈ ಕೆಸರಾದರೇ ಬಾಯಿ ಮೊಸರು ಎಂಬ ಮಾತಿನಂತೆ ಕೃಷಿಹೊಂಡ ಇದ್ರೇ ಹೊಸ ಪೈರು, ಹೊಸ ಆದಾಯ ರೈತನ ತೆಕ್ಕೆಗೆ ಎಂಬಂತಾಗಿ ಬೇಸಾಯಕ್ಕೆ ಕೃಷಿಹೊಂಡದ ಜಲಧಾರೆ ಜೀವಕಳೆ ತಂದಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/09/2022 06:49 pm