ನವಲಗುಂದ: ಕೃಷಿಗೆ ಪೂರಕ, ರೈತಾಪಿ ಜನರಿಗೆ ಸಹಕಾರಿ ಕೃಷಿಹೊಂಡ ನಿರ್ಮಾಣ ಕಾಮಗಾರಿ. ಈಗಾಗಲೇ ಲಕ್ಷ- ಲಕ್ಷ ರೈತರನ್ನು ತಲುಪಿ ಪ್ರತಿ ರೈತನ ಬಾಳನ್ನು ಸಮೃದ್ಧಿಯಾಗಿಸಿದೆ.
ಹೌದು, ಒಣ ಬೇಸಾಯದ ಮಾರ್ಗ ಬೆನ್ನಟ್ಟಿದ ರೈತರ ಪಾಲಿಗೆ ವರದಾನವಾದ ಕೃಷಿಹೊಂಡ ವಾಣಿಜ್ಯ ಹಾಗೂ ತೋಟಗಾರಿಕೆ ಬೆಳೆಗಳಿಗೂ ಸಹಕಾರಿಯಾಗಿ ಮಳೆ ಅಭಾವ ಉಂಟಾದರೂ ಒಂದು ಬೆಳೆ ಸಂಪೂರ್ಣ ತೆಗೆಯಬಲ್ಲ ಭರವಸೆ ಮೂಡಿಸಿದೆ.
ಅದರಂತೆ ನವಲಗುಂದ ತಾಲೂಕಿನ ಮೊರಬ ಗ್ರಾಮದ ಉತ್ಸಾಹಿ ರೈತ, ಪ್ರವೃತ್ತಿಯಲ್ಲಿ ಲಾರಿ ಚಾಲಕ ಮಂಜುನಾಥ ಅಣ್ಣಿಗೇರಿ ಸಹ ತಮ್ಮ 5 ಎಕರೆ ಜಮೀನಿನಲ್ಲಿ 100/100 ಸುತ್ತಳತೆಯ ಕೃಷಿಹೊಂಡ ನಿರ್ಮಾಣ ಕಾರ್ಯ ಕೈಗೊಂಡಿದ್ದಾರೆ. ಅವರ ಜೊತೆ 'ಪಬ್ಲಿಕ್ ನೆಕ್ಸ್ಟ್' ಪ್ರತಿನಿಧಿ ನಡೆಸಿದ ಚಿಟ್ ಚಾಟ್ ಇಲ್ಲಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/05/2022 07:43 pm