ನವಲಗುಂದ: ದೇಶಪಾಂಡೆ ಫೌಂಡೇಶನ್ ಸಹಾಯಹಸ್ತದಲ್ಲಿ ಕೃಷಿಹೊಂಡ ನಿರ್ಮಿಸಿಕೊಂಡ ಅದೆಷ್ಟೋ ರೈತರ ಕೃಷಿ ಬದುಕು ಬಂಗಾರವಾಗಿ ರೈತರ ಜೀವನ ಹಸನಾಗಿದೆ.
ಹೌದು... ಧಾರವಾಡ ಜಿಲ್ಲೆಯಾದ್ಯಂತ ಕೃಷಿಹೊಂಡದ ಕ್ರಾಂತಿ ಕಂಡ ರೈತರು, ಮಳೆ ಹೋದರೂ ಒಂದು ಬೆಳೆ ತೆಗೆಯುವ, ಪರ್ಯಾಯ ಬೆಳೆ ಬೆಳೆಯುವ ಕೃಷಿಹೊಂಡದ ಕಾಯಕ ನಮಗೂ ಅವಶ್ಯ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನವಲಗುಂದ ತಾಲೂಕಿನ ಇಬ್ರಾಹಿಂಪುರದ ರೈತ ಬಸವರಾಜ ಚಿಕ್ಕಣ್ಣನವರ 'ನಮಗೂ ಕೃಷಿಹೊಂಡ ಬೇಕು. ಆ ಕೃಷಿಹೊಂಡದ ಮೂಲಕ ನಾವು ಕೃಷಿ ಕಾಯಕ ಕೈಗೊಂಡು ಕೃಷಿಯಲ್ಲಿ ಏನಾದ್ರೂ ಸಾಧನೆ ಮಾಡಬೇಕು' ಎಂಬ ಹಂಬಲದ ಮಾತು ಇಲ್ಲಿವೆ...
25 ಎಕರೆ ಕೃಷಿ ಜಮೀನು ಹೊಂದಿರುವ ರೈತ ಬಸವರಾಜ ಚಿಕ್ಕಣ್ಣನವರ 100*100 ಕೃಷಿಹೊಂಡ ನಿರ್ಮಾಣ ಮಾಡಿಕೊಳ್ಳಲು ಇಚ್ಛಿಸಿದ್ದು, ಮೀನುಗಾರಿಕೆ ಸೇರಿದಂತೆ ತೋಟಗಾರಿಕೆ ಬೆಳೆ ಬೆಳೆದು ಕೃಷಿ ಕ್ಷೇತ್ರದಲ್ಲೇ ಹೊಸ ಮಾರ್ಗ ಕಂಡುಕೊಂಡು ಮಾದರಿ ರೈತ ಆಗ ಬಯಸಿದ್ದಾರೆ.
ಈ ರೈತನ ಅಭಿಪ್ರಾಯಕ್ಕೆ ದೇಶಪಾಂಡೆ ಫೌಂಡೇಶನ್ ಸಹ ಸಹಾಯಹಸ್ತ ನೀಡಿ ಕೃಷಿಹೊಂಡ ನಿರ್ಮಾಣಕ್ಕೆ ಮುಂದಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
26/03/2022 09:09 pm