ಅಣ್ಣಿಗೇರಿ: ಮಳೆ ಹೋದರೂ ತುಂಬಿದ ಕೃಷಿಹೊಂಡದಿಂದ ಒಂದು ಬೆಳೆ ಬರುತ್ತೆ. ಒಣ ಬೇಸಾಯದ ಕಷ್ಟ ಮರೆಸಿ ಕೃಷಿಹೊಂಡದ ನೀರಾವರಿ ಕೃಷಿ, ವಾರ್ಷಿಕ 4 ಲಕ್ಷ ರೂಪಾಯಿ ಆದಾಯದ ಖುಷಿ ಕೊಡುತ್ತೆ. ಇದು ರೈತ ಗುರುಶಿದ್ದಪ್ಪ ಚವಡಿಯವರಂತಹ ಅದೆಷ್ಟೋ ರೈತರು ಮಾತು.
ಅಣ್ಣಿಗೇರಿ ತಾಲೂಕಿನ ಬಸಾಪೂರ ಗ್ರಾಮದ ಪ್ರಗತಿಪರ ರೈತ ಗುರುಶಿದ್ದಪ್ಪ ಚವಡಿ ತಾನು ಸಹ ಇತರರಂತೆ ದೇಶಪಾಂಡೆ ಫೌಂಡೇಶನ್ ಸಹಕಾರ ಪಡೆದು, ತಮ್ಮ 3 ಎಕರೆ ಜಮೀನಿನಲ್ಲಿ ನಿರ್ಮಿಸಿರುವ 100 ಅಡಿ X ಅಡಿ 100 ಸುತ್ತಳತೆಯ ಕೃಷಿಹೊಂಡದ ಕೃಷಿಯಲ್ಲಿ ಹೊಸ ಸಾಕಾರ ಕಂಡಿದ್ದಾರೆ.
ಮುಂಗಾರು ಮೆಣಸಿನಕಾಯಿ, ಹತ್ತಿ, ಈರುಳ್ಳಿ ಬೆಳೆದ ಇವರು ಹಿಂಗಾರು ಗೋಧಿ, ಜೋಳ, ಕಡಲೆ ಬೆಳೆದು ಮುಂಗಾರು ಅತಿವೃಷ್ಟಿಯ ಅಲ್ಪ ಲಾಭದ ಖುಷಿಯ ನಡುವೆ ಈ ಬಾರಿಯ ಹಿಂಗಾರು ಹೊಸ ಹಿಗ್ಗು ತಂದಿದೆ.
ಇದೇ ಮೊದಲು ಒಣ ಬೇಸಾಯದ ಭೂಮಿಯಲ್ಲಿ ಆರ್ಥಿಕ ಏರಿಳಿತಕ್ಕೆ ಸಿಲುಕಿದ ರೈತರ ಕೃಷಿ ಬದುಕಿಗೆ, ಕೃಷಿಹೊಂಡ ಉತ್ತೇಜನ ನೀಡಿ ವಿಧ ವಿಧದ ಬೆಳೆ ಬೆಳೆಯಲು ಸದಾವಕಾಶ ನೀಡಿ ರೈತರ ಬಾಳನ್ನು ಬಂಗಾರ ಮಾಡಿದೆ.
Kshetra Samachara
15/03/2022 07:58 pm