ಅಣ್ಣಿಗೇರಿ : ಕೃಷಿ ಬದುಕೆಂದರೆ ಹಾಗೇ, ಇಲ್ಲಿ ಯಾವ ಕಾರ್ಯವೂ ಸರಳವಲ್ಲ, ಹಾಗೇ ಯಾವುದೊಂದು ಬಲಿಷ್ಠ ನಿರ್ಧಾರ ತೆಗೆದುಕೊಂಡ್ರು ಕೇಡಿಲ್ಲ ಬಿಡಿ. ಹೀಗೆ ಇಲ್ಲೊಂದು ರೈತ ಸಮುದಾಯ ಕೃಷಿಹೊಂಡ ನಿರ್ಮಾಣ ಕಾಮಗಾರಿಯ ಬಲಿಷ್ಠ ನಿರ್ಧಾರ ಮಾಡಿ ಒಣ ಬೇಸಾಯದ ಭೂಮಿಯಲ್ಲಿ ಜಲಧಾರೆ ಹರಿಸಿದ್ದಾರೆ.
ಹೌದು ! ಮಳೆ ಆಶ್ರಿತ ಬೇಸಾಯದ ನಡುವೆ ಏರಿಳಿತ ಕಾಣುತ್ತಿದ್ದ, ರೈತರಿಗೆ ಮಳೆ ಇಲ್ಲವಾದರೂ ಅಥವಾ ಹಿಂಗಾರು ಹಂಗಾಮಿನಲ್ಲೂ ತಮ್ಮಿಷ್ಟದ ಬೆಳೆ ಬೆಳೆಯಲು ದೇಶಪಾಂಡೆ ಫೌಂಡೇಶನ್ ಕೃಷಿಹೊಂಡ ನಿರ್ಮಾಣ ಯೋಜನೆ ಪೂರಕವಾಗಿ ರೈತರ ಆದಾಯದ ಪ್ರಮಾಣ ಸಹ ದ್ವಿಗುಣ ಮಾಡಿದೆ.
ಅದರಂತೆ ಅಣ್ಣಿಗೇರಿ ತಾಲೂಕಿನ ಬಸಾಪೂರ ಗ್ರಾಮದ ರೈತ ಅನಿಲಕುಮಾರ ಚವಡಿ ತಮ್ಮ ಹತ್ತು ಎಕರೆ ಭೂಮಿಯಲ್ಲಿ ನೂರು ನೂರು ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡು ಮುಂಗಾರು ಅಲ್ಪಲಾಭದ ಮೆಣಸಿನಕಾಯಿ ಉತ್ತಮವಾದ ಹೆಸರು, ಈರುಳ್ಳಿ, ಬೆಳೆ ಬೆಳೆದು ಸಧ್ಯ ಹಿಂಗಾರು ಸಂಪೂರ್ಣ ಕಡಲೆ ಬೆಳೆ ಬೆಳೆದು ಅತ್ಯುತ್ತಮ ಆದಾಯದ ಭರವಸೆ ಹೊಂದಿದ್ದಾರೆ.
ರೈತ ಓದಿದ್ದು, ಹತ್ತನೇ ತರಗತಿ ಆದರೂ ತಮ್ಮ ಕೃಷಿ ಕಾಯಕದಲ್ಲಿ ಯಾರಿಗೂ ಕಡಿಮೆ ಇರದಂತಹ ವಾರ್ಷಿಕ 5 ಲಕ್ಷ ಆದಾಯ ಪಡೆಯುವ ಭರವಸೆ ಜೊತೆ ದೇಶಪಾಂಡೆ ಫೌಂಡೇಶನ್ ಕೃಷಿಹೊಂಡ ನಿರ್ಮಾಣ ಕಾಮಗಾರಿಗೆ ಥ್ಯಾಂಕ್ಸ್ ಎಂತಾರೇ.
ಒಟ್ಟಿನಲ್ಲಿ ಆಧುನಿಕತೆ ಓಟದಲ್ಲಿ ಕೃಷಿ ಕಾಯಕವನ್ನು ಬಲಗೊಳಿಸಲು, ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ನಿರ್ಮಾಣ ಕಾಮಗಾರಿಗೆ ಅದೆಷ್ಟೋ ರೈತ ಮನಸ್ಸನ್ನು ಹೆಚ್ಚಿನ ಆದಾಯದ ಕನಸಿನ ರೆಕ್ಕೆಗಳನ್ನು ಪುಷ್ಠಿಗೊಳಿಸಿ ಲಕ್ಷ ಲಕ್ಷ ಆದಾಯದ ಭರವಸೆಯನ್ನು ಇಮ್ಮಡಿಗೊಳಿಸಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
21/02/2022 09:50 pm