ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಬೆಳಿ ಮಿಂಚತೈತಿ ನೋಡ... ನೋಡ: ಬೆಳೆದವರು ಗುರುನಾಥ ಮಣಕವಾಡ

ಜಲ್ಲಿ ಬುಟ್ಟ್ಯಾಗ ಕಾಳು ತುಂಬ್ಯಾರ

ಬೀಸು ಗಾಳಿಗೆ ಹುರುಪಿಲೆ ತೂರ‍್ಯಾರ

ಜೊಳ್ಳು-ಪೊಳ್ಳು ಬ್ಯಾರೆ ಮಾಡ್ಯಾರ

ಕಣ ಮಾಡಿ ಚಕ್ಕಡಿ ಹೂಡಿ ಮನಿಗೆ ತಂದಾರ

ಖುಷಿಯಿಂದ ನಗತೈತಿ ರೈತನ ತುಂಬು ಸಂಸಾರ

ನಮ್ಮ ಉತ್ತರ ಕರ್ನಾಟಕ ಭಾಗದ ರೈತರು ಕೃ‍ಷಿಯಲ್ಲೇ ಖುಷಿ ಕಾಣುವವರು. ಅವರಿಗೆ ದುಡಿಮೆಯೇ ದೈವ. ಇದರಂತೆ ಬಾಳಿ ಬದುಕುತ್ತಿದ್ದಾರೆ ನವಲಗುಂದ ತಾಲೂಕು ನಾವಳ್ಳಿ ಗ್ರಾಮದ ಯುವ ಅನ್ನದಾತ ಗುರುನಾಥ ಮಣಕವಾಡ. ಊರ ಮಂದಿ ಹೇಳುವಂತೆ ಗುರುನಾಥ ಅವರದು ದೊಡ್ಡ ಕಮತದ ಮನೆ. ಒಟ್ಟು 30 ಎಕರೆ ಹೊಲದಲ್ಲಿ ಉಳುಮೆ ಮಾಡುತ್ತಿರುವ ಇವರು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ. ಇವತ್ತಿನ ದೇಶ್ ಕೃಷಿ ಸಂಚಿಕೆಯಲ್ಲಿ ಗುರುನಾಥ್ ಅವರು ನಿಮ್ಮ ಪಬ್ಲಿಕ್ ನೆಕ್ಸ್ಟ್ ಜೊತೆ ಮನಸಿನ ಮತುಕತೆ ನಡೆಸಿದ್ದಾರೆ. ಅವರ ದುಡಿಮೆಯ ಅನುಭವ ಏನೇನಿದೆ? ಬನ್ನಿ ಕೇಳೋಣ ನೋಡೋಣ...

Edited By : Manjunath H D
Kshetra Samachara

Kshetra Samachara

14/12/2021 08:05 am

Cinque Terre

83.36 K

Cinque Terre

0

ಸಂಬಂಧಿತ ಸುದ್ದಿ