ನವಲಗುಂದ: ಎಲ್ಲವೂ ಇದ್ದಾಗ ಏನಾದರೊಂದು ಮಾಡೋದು ಸಾಧನೆ ಅಲ್ಲ. ಏನೂ ಇಲ್ಲದಿರುವಾಗ ಎಲ್ಲವನ್ನೂ ಮಾಡೋದು ಸಾಧನೆ. ಅದರಲ್ಲೂ ಒಣ ಭೂಮಿಯಲ್ಲಿ ಕೃಷಿ ಮಾಡುವವರಿಗೆ ಎಂಟೆದೆ ಬೇಕು. ಅಂತಹ ಎಂಟೆದೆಯ ಅನ್ನದಾತ ಇಲ್ಲಿದ್ದಾರೆ ನೋಡಿ..
ಇವರು ನವಲಗುಂದ ತಾಲೂಕಿನ ನಾವಳ್ಳಿ ಗ್ರಾಮದ ಉತ್ಸಾಹಿ ಕೃಷಿಕ ವೀರಪ್ಪ ಪಲ್ಲೇದ. ಬೋರ್ ವೆಲ್ ಅಥವ ಬೇರೆ ನೀರಿನ ಮೂಲ ಇಲ್ಲದೇ ಕೇವಲ ತಮ್ಮ ಹೊಲದ ಕೃಷಿ ಹೊಂಡದ ನೀರು ಬಳಸಿ ತರಕಾರಿ ಹಾಗೂ ಮಿಶ್ರ ಬೆಳೆ ಬೆಳೆಯುತ್ತಿದ್ದಾರೆ. ಬನ್ನಿ ಇವತ್ತಿನ 'ದೇಶ್ ಕೃಷಿ' ಸಂಚಿಕೆಯಲ್ಲಿ ವೀರಪ್ಪ ಪಲ್ಲೇದ ಅವರೊಂದಿಗೆ ಒಂಚೂರು ಕುಶಲೋಪರಿಯ ಮಾತಾಡೋಣ.
Kshetra Samachara
12/12/2021 04:53 pm