ನವಲಗುಂದ : ಯಾವುದೋ ಒಂದು ನಿರ್ಧಾರ ಒಬ್ಬ ರೈತನನ್ನು ವಾರ್ಷಿಕ 8 ಲಕ್ಷ ಆದಾಯದ ಒಡೆಯನ್ನಾಗಿ ಮಾಡುತ್ತೇ, ಕಪ್ಪು ಭೂಮಿಯಲ್ಲಿ ಕೃಷಿಹೊಂಡ ಆಶ್ರೀತ ರೇಷ್ಮೆ ಬೆಳೆ ಬೆಳೆಯಲು ಪ್ರೇರಣೆ ಆಗುತ್ತೇ ಅಂದ್ರೇ ನೀವೂ ನಂಬ್ತಿರಾ, ನಂಬಲೇಬೇಕು.
ಅಂತಹದ್ದೊಂದು ಕೃಷಿ ಕ್ರಾಂತಿಯನ್ನು ದೇಶಪಾಂಡೆ ಫೌಂಡೇಶನ್ ಮಾಡಿ. ಒಬ್ಬರಲ್ಲ ಇಬ್ಬರಲ್ಲ ನವಲಗುಂದ ತಾಲೂಕಿನ ಹಳ್ಳಿಗಳ ಸಾವಿರಾರು ರೈತರು ಬಾಳಲ್ಲಿ ಬೆಳದಿಂಗಳ ಬೆಳಕು ಚೆಲ್ಲಿ, ಹೊಸ ಆವಿಷ್ಕಾರದ ಜೊತೆ ನೆಮ್ಮದಿಯ ಜೀವನಕ್ಕೆ ಮಾರ್ಗ ತೋರಿದೆ.
ಆ ನೆಮ್ಮದಿ ಪಾಲಲ್ಲಿ ಒಬ್ಬರಾದವ್ರೇ ಶಾನವಾಡ ಗ್ರಾಮದ ಪ್ರಕಾಶಗೌಡ ಪಾಟೀಲ್ 24 ಎಕರೆ ಜಮೀನ ಒಡೆಯ ಹಾಗೂ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ 120/140 ಸುತ್ತಳತೆಯ ಕೃಷಿಹೊಂಡ ನಿರ್ಮಾಣದ ಸಾಹುಕಾರ.
ತಮ್ಮ 24 ಎಕರೆ ಜಮೀನಿಗೆ ಹೊಂದುವಂತೆ ಕೃಷಿಹೊಂಡ ನಿರ್ಮಿಸಿಕೊಂಡ ಇವರು ಮುಂಗಾರು ಹೆಸರು, ಗೋವಿನಜೋಳ, ಈರುಳ್ಳಿ ಸೂರ್ಯಕಾಂತಿ ಜೊತೆ ರೇಷ್ಮೆ ಬೆಳೆ ಬೆಳೆದು 8 ಲಕ್ಷ ಗರಿಷ್ಠ ಆದಾಯ ಗಳಿಕೆಯ ಕಸರತ್ತು ಮಾಡಿದ್ದಾರೆ.
ಒಣ ಬೇಸಾಯದ ಭೂಮಿಯಲ್ಲಿ ಬೆವರು ಸುರಿಸಿದರೂ ಬಾರದ ಬೆಳೆಯನ್ನು ಅದರ ಆದಾಯವನ್ನು ಕೃಷಿಹೊಂಡ ಒಂದೇ ಏಟಿಗೆ ದುಪ್ಪಟ್ಟು ಲಾಭ ತಂದು ಕೊಟ್ಟಿದೆ.
ಅದರಂತೆ ರೈತ ಪ್ರಕಾಶಗೌಡ ತಮ್ಮ ಜಮೀನಿನಲ್ಲಿ ಬೆಳೆಗಳು ಜೊತೆಗೆ ಪೇರಲ್, ತೆಂಗಿನಮರ, ಸೇರಿ ಹೂದೋಟ ಮಾಡುವ ಆಸಕ್ತಿ ಸಹ ನನಸು ಮಾಡಿಕೊಳ್ಳಲು ಮುಂದಾಗಿದ್ದಾರೆ, ಒಟ್ಟಿನಲ್ಲಿ ಕೃಷಿಹೊಂಡ ರೈತರ ಕಷ್ಟದ ಬದುಕಿಗೆ ಇಷ್ಟದ ವರವಾಗಿ ಅಭ್ಯುದಯಕ್ಕೆ ಕಾರಣವಾಗಿದೆ.
Kshetra Samachara
30/10/2021 07:56 pm