ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರಗುಂದ: ಪದವಿ ಪ್ರಮಾಣಪತ್ರ ಮನೆಯಲ್ಲಟ್ಟ ಪದವೀಧರ, ಕೃಷಿ ಕಾಯಕಕ್ಕೆ ಸೈ ಎಂದ

ನರಗುಂದ : "ಓದು ಬದುಕಿಗೆ ದುಡಿಮೆಗಲ್ಲ" ಎಂಬ ಮಾತಿನಂತೆ ಇಲ್ಲೊಬ್ಬ ಯಂಗ್ ಸ್ಟಾರ್ ತನ್ನ ಪದವಿ ಪತ್ರ ಮನೆಯಲ್ಲಿಟ್ಟು ನೇಗಿಲು ಹಿಡಿದು 26ನೇ ವಯಸ್ಸಿನಲ್ಲಿ ಕೃಷಿ ಕ್ಷೇತ್ರಕ್ಕೆ ಕಾಲಿಟ್ಟು ತನ್ನ ಗೆಳೆಯರಿಗೆ ಕೃಷಿಗೆ ಬನ್ರಪ್ಪಾ ಇಲ್ಲಿಯೂ ಲಕ್ಷ ಲಕ್ಷ ಆದಾಯದ ಮಾರ್ಗವಿದೆ ಎನ್ನುತ್ತಿದ್ದಾನೆ.

ಅರೆ..! ಇದೇನಪ್ಪಾ ಪದವಿ ಕಲಿತು ಕೃಷಿ ಅಂದ್ರಾ ? ಎಲ್ಲರಂತೆ ಸ್ನಾತಕೋತ್ತರ ಪದವಿ ಮಾಡ ಹೊರಟ ನರಗುಂದ ತಾಲೂಕಿನ ಖಾನಾಪುರ ಗ್ರಾಮದ ರೈತ ಮಲ್ಲೇಶ ಮೈಲಾರಪ್ಪ ಮದಗುಣಕಿ ತಮ್ಮೂರಲ್ಲಿನ ಕೃಷಿ ಕ್ಷೇತ್ರದಲ್ಲಿ ಕೆಲಸಗಾರರ ಅಭಾವ ಕಂಡು ಬಿಎ ಶಿಕ್ಷಣ ಮುಗಿಸಿ ತಾನೇ ಕೃಷಿಗೆ ಮುನ್ನುಗ್ಗಿ ತಮ್ಮ 16 ಏಕರೆ ಹೊಲದಲ್ಲಿ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ನಿರ್ಮಿಸಿಕೊಂಡು ಬಂಪರ್ ಬೆಳೆ ಬೆಳೆದಿದ್ದಾರೆ.

ಗೋವಿನಜೋಳ, ಕಡಲೆ, ಹತ್ತಿ, ಈರುಳ್ಳಿ, ಶೇಂಗಾ, ಜೋಳ ಸೇರಿದಂತೆ ಬರೋಬ್ಬರಿ 7 ರಿಂದ 8 ಲಕ್ಷ ಬೆಲೆ ತರುವ ಬೆಳೆ ಸಧ್ಯ ರೈತ ಮಲ್ಲೇಶ್ ಮದಗುಣಕಿ ಹೊಲದಲ್ಲಿದ್ದು ಕೃಷಿಹೊಂಡ ನೀಡಿದ ಕೊಡುಗೆ ನಮಗೆ ಸಾರ್ಥಕ ಬದುಕು ಕಲ್ಪಿಸಿದೆ ಎನ್ನುತ್ತಾರೆ.

ಕೃಷಿಹೊಂಡ ಇರದ ದಿನಗಳಲ್ಲಿ 16 ಎಕರೆ ಜಮೀನಿಗೆ ಕೇವಲ 3 ಲಕ್ಷ ಆದಾಯಕ್ಕೆ ತೃಪ್ತಿ ಪಟ್ಟಿದ್ದ ಇವರ ಆದಾಯವೀಗ ಬರೋಬ್ಬರಿ 8 ಲಕ್ಷ ಏರಿಕೆ ಕಂಡಿದ್ದು ಅಚಲ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ನಿರ್ಮಾಣ ನಿರ್ಧಾರದ ಮೂಲಕ.

ಕೃಷಿಯಲ್ಲೇನಿದೆ ? ಎಂದು ತುತ್ತಿನ ಕೈ ಚೀಲ ಹಿಡಿದು ನಗರದಲ್ಲಿ ಕೆಲಸ ಅರಸುವವರ ನಡುವೆ ಪದವಿ ಪತ್ರ ಮನೆಯಲ್ಲಿಟ್ಟು ಕೂರಿಗೆ ಹಿಡಿದ ಬಿಎ ಪದವೀಧರ ರೈತ ಮಲ್ಲೇಶ್ ಮೈಲಾರಪ್ಪ ಮದಗುಣಕಿಗೆ ಶಹಬ್ಬಾಷ್ ಎನ್ನೋಣ.

Edited By : Manjunath H D
Kshetra Samachara

Kshetra Samachara

25/09/2021 12:26 pm

Cinque Terre

58.47 K

Cinque Terre

6

ಸಂಬಂಧಿತ ಸುದ್ದಿ