ನರಗುಂದ: ನಾವ್ ಕಷ್ಟಪಟ್ಟು ದುಡಿಬೇಕು ನಮ್ಮ ಹೊಲದಾಗ ಚಲೋ ಬೆಳಿ ಬೆಳಿಬೇಕು ಅನ್ನೋ ಆಸೆ ಯಾವ ರೈತರಿಗಿಲ್ಲ ಹೇಳ್ರಿ. ಈ ನಿಮ್ಮ ಆಸೆಗೆ ಆ ಮಳೆದೇವ ಅಷ್ಟೇ ಪೂರಕವಾಗಿ ಸುರಿಯಬೇಕಲ್ಲ ಮಳೆ ಹೋದರೆ ಈ ಬೇಸಾಯದ ಪಾಡು ಹೇಳಂಗಿಲ್ಲ ನೋಡ್ರಿ ಅಷ್ಟ ಕಷ್ಟ ಅಕ್ಕೈತಿ.
ಆದ್ರೇ.! ಇಲ್ಲೋಬ್ಬ ರೈತರು ಈ ಮಳೆ ಆಧಾರಿತ ನೀರನ್ನು ಸಂಗ್ರಹಿಸಿ ಮಳೆ ಇಲ್ಲವಾದ್ರೂ ಹೊಸ ಹೊಸ ಬೆಳೆ ತೆಗೆದಾರ ನೋಡ್ರಿ. ಅದ್ಹೇಂಗ್ ಸಾಧ್ಯ ರೀ ಅಂತಿರೇನ್ರೀ ಕಾಕಾರ. ಸುಳ್ಳಲ್ಲ ರೀ ನಾವ್ ಹೇಳೋದು ನಿಜಾ ಐತಿ, ದೇಶಪಾಂಡೆ ಫೌಂಡೇಶನ್ ನೀಡಿದ ಕೃಷಿ ಹೊಂಡ ನಿರ್ಮಾಣ ಸಾಲದ ಯೋಜನೆ ಪಡಕೊಂಡು ನೂರು ನೂರು ಸುತ್ತಳತೆ ಕೆರೆ ಕಡಿಸಿ ಎಂ.ಎ.ಪತ್ರಿಕೋದ್ಯಮ ಪದವೀಧರ ಕೃಷಿ ಮಾಡಿ ಗೆದ್ದ ತೋರಿಶ್ಯಾನ್ ರೀ.
ಹೌದು ರೀ ! ಅನಿಲ್ ಈರಪ್ಪ ಛಲವಾದಿ ಎಂಬ ಗದಗ ಜಿಲ್ಲಾ ನರಗುಂದ ತಾಲೂಕಿನ ಹದಲಿ ಗ್ರಾಮದ ಈ ಹುಡುಗ. ಖಾಸಗಿ ಮಾಧ್ಯಮ ಸಂಸ್ಥೆ ಕೆಲ್ಸಾ ಬಿಟ್ಟು ಸ್ವಂತ ಊರು ಹದಲಿಯ ತನ್ನ ಜಮೀನಿನ ಒಳಗೆ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಾಗ ಕೃಷಿಹೊಂಡ ನಿರ್ಮಾಸಿಕೊಂಡು ಬರೋಬ್ಬರಿ 11 ಎಕರೆ 35 ಗುಂಟೆ ಹೊಲದಾಗ ಮಿನ್ನಾ ಮಿನ್ನಾ ಬೆಳೆ ಬೆಳೆದಾನ ಅದರ ಜೊತೆ ಕೋಳಿ ಸಾಕಾಣಿಕೆ ಸಹಿತ ಮಾಡ್ಯಾನ್. ಹಾ ಬರ್ರೀ ಆ ಪದವೀಧರ ಕೃಷಿಕನ ಶ್ರಮದ ಮಾತು ಒಮ್ಮೆ ಕೇಳೂನು.
ಕೇಳಿದ್ರಲ್ಲಾ, ಮೊದ ಮೊದಲು ಇದೇ 11 ಎಕರೆ 35 ಗುಂಟೆ ಹೊಲದಾಗ ಒಣ ಬೇಸಾಯ ಮಾಡಿ 2-3 ಲಕ್ಷ ಆದಾಯ ತೆಗಿದಿದ್ದ ರೈತರು, ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಾಗ ಕೆರೆ ತೆಗೆಯಿಸಿ ನೀರು ಸಂಗ್ರಹ ಮಾಡಿ ಹೊಲಕ್ಕೆ ಸ್ಪಿಂಕ್ಲರ್ ಪೈಪ್ ಅಳವಡಿಸಿ ಸಸಿಗಳಿಗೆ ನೀರುಣಿಸಿ ಪೇರಲ್, ಈರುಳ್ಳಿ, ಮೆಣಸಿನ ಗಿಡ, ಗೋವಿನಜೋಳ, ಜೊತೆ ತುಸು ತರಕಾರಿ ಜೊತಿಗೆ ಈ ಕೋಳಿ ಸಾಕಾಣಿಕೆ ಮಾಡಿ 5-6 ಲಕ್ಷ ಆದಾಯ ತಗದ ಯುವಕರಿಗೆ ಪಟ್ಟಣ ಬಿಟ್ಟು ಹಳ್ಳಿಗೆ ಬರ್ರಿ ಕೃಷಿ ಮಾಡೋನು ಅನ್ನಾಕತ್ತಾರ.
ಅರೆರೆ,, ಈ ಕೃಷಿಹೊಂಡ ಮಾಡಿದ್ರ ಇಷ್ಟೇಲ್ಲಾ ಪಾಯಿದೆ ಐತಿ ಅನ್ನೋ ಸಂಶಯ ಬ್ಯಾಡ್ರೀ ನೀವೋಮ್ಮೆ ಹದಲಿಗೆ ಭೇಟಿ ಕೋಡ್ರಿ ಇಲ್ಲಾದ್ರ ರೈತ ಅನಿಲ್ ಛಲವಾದಿಗೆ ಪೋನ್ ಮಾಡಿ ಮಾಡ್ತಾರ್ರೀ ನೀವೂ ಕೃಷಿ ಹೊಂಡ ಮಾಡಸ್ರೀ ಉತ್ತಮ ಬೆಳೆ ಬೆಳಿರಿ ಪದವೀಧರ ರೈತ ಅನಿಲ್ ಛಲವಾದಿ ಮೊಬೈಲ್ ಸಂಖ್ಯೆ : 8722122143 ನೋಡ್ರಿ ಕೃಷಿಹೊಂಡ ಮಾಡ್ಸೊದು ಮರಿಬ್ಯಾಡ್ರಿ.
Kshetra Samachara
16/09/2021 09:05 pm