ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಮಳೆ ನಂಬಿದ ರೈತನಿಗೆ ಕೆರೆ ಆಧಾರ

ನವಲಗುಂದ: ನಮ್ಮ ದೇಶದಲ್ಲಿ ಬಹುತೇಕರ 'ಜೀವನಾಧಾರ ಬೇಸಾಯ' ಹಾಗಾಗಿ ದೇಶದಲ್ಲಿ ಕೃಷಿಗೆ ತನ್ನದೆಯೇ ಆದ ಗೌರವವಿದೆ. ಕೃಷಿ ನಂಬಿ ಬದುಕು ಕಟ್ಟಿಕೊಂಡವರ ಜೀವನ ಯಾವತ್ತು ಹಾಳಾಗಲ್ಲ ಎನ್ನುವ ನಂಬಿಕೆಯೂ ಇದೆ.

ಆದರೆ ಕಾಲ ಬದಲಾದಂತೆ ಕೃಷಿ ಅವನತಿಯ ಹಾದಿ ಹಿಡಿಯುತ್ತಿದೆ ಕಾರಣ ಹವಾಮಾನದ ವೈಪರೀತ್ಯ ಇಂತಹ ಸನ್ನಿವೇಶದಲ್ಲಿ ರೈತರ ಧ್ವನಿಯಾಗಿ ದೇಶಪಾಂಡೆ ಫೌಂಡೇಶನ್ ಶ್ರಮಿಸುತ್ತಿದೆ ಮಣ್ಣಿನ ಮಕ್ಕಳ ಬೆನ್ನಿಗೆ ನಿಂತ ದೇಶಪಾಂಡೆ ಫೌಂಡೇಶನ್ ಕೃಷಿಗೆ ಬೇಕಾದ ಸಹಕಾರ ನೀಡುತ್ತಿದೆ.

ಅಷ್ಟಕ್ಕೂ ದೇಶಪಾಂಡೆ ಫೌಂಡೇಶನ್ ಮಾಡುತ್ತಿರುವ ಕಾರ್ಯಾವಾದರೂ ಏನು ಅದರಿಂದ ಅನ್ನದಾತರಿಗೆ ಆದ ಅನುಕೂಲವೇನು ಅಂದರೆ ಧಾರವಾಡ ಜಿಲ್ಲೆ ಹಲವು ಹಳ್ಳಿಗಳ ರೈತರ ಬದುಕು ಬದಲಾದ ಪರಿಯೇ ಇದಕ್ಕೆ ಸಾಕ್ಷಿ..

ನವಲಗುಂದ ತಾಲೂಕಿನ ಕಡದಳ್ಳಿ ಗ್ರಾಮದ ಡಿಪ್ಲೋಮಾ ಸಿವಿಲ್ ಇಂಜಿನಿಯರಿಂಗ್ ಓದಿದ ರೈತ ಅಶೋಕ ಹೆಮರೆಡ್ಡಿ ಕರಮಳ್ಳಿ ಅವರು ತಮ್ಮ 20 ಎಕರೆ ಜಮೀನಿನಲ್ಲಿ ಕೃಷಿ ಮಾಡಲು ಮುಂದಾಗಿದ್ದರು ಆದರೆ ನೀರಿಕ್ಷಿತ ಆದಾಯ ಪಡೆಯಲು ವಿಫಲರಾಗಿದ್ದರು. ಈ ವೇಳೆ ಗ್ರಾಮದಲ್ಲಿ ಸಂಘವೊಂದನ್ನು ರಚಿಸಿಕೊಡುವ ಮೂಲಕ ದೇಶಪಾಂಡೆ ಫೌಂಡೇಶನ್ ಕೃಷಿಹೊಂಡ ನಿರ್ಮಿಸಿಕೊಳ್ಳಲು ಪ್ರೋತ್ಸಾನ ನೀಡಿದೆ.

ಇದರ ಸದುಪಯೋಗಪಡೆದುಕೊಂಡ ರೈತ ಅಶೋಕ ರೆಡ್ಡಿ ತಮ್ಮ ಹೊಲದಲ್ಲಿ 200 ಅಡಿ ಉದ್ದ, 200 ಅಡಿ ಅಗಲ ಹಾಗೂ 15 ಅಡಿ ಆಳದ ಕೃಷಿಹೊಂಡ ನಿರ್ಮಿಸಿಕೊಂಡು ಮಣ್ಣಲ್ಲಿ ಹೊನ್ನು ಬೆಳೆಯುತ್ತಿದ್ದಾರೆ. ಮಳೆ ಮೇಲೆ ಅವಲಂಬನೆಯಾಗಿದೆ ರೈತ ಇಂದು ಕೆರೆ ನಂಬಿ ಬದುಕು ಬದಲಾಯಿಸಿಕೊಂಡಿದ್ದಾನೆ.

ಕೆರೆ ನಿರ್ಮಾಣದ ಬಳಿಕ ರೈತ ಎರಡು ಬೆಳೆ ಬೆಳೆಯುವ ಮೂಲಕ ಉತ್ತಮ ಇಳುವರಿಯೊಂದಿಗೆ ಹೆಚ್ಚಿನ ಆದಾಯ ಪಡೆಯುತ್ತಿದ್ದಾರೆ. ಕೆರೆ ನಿರ್ಮಾಣದ ಮುಂಚೆ ಒಂದು ಎಕೆರೆಯಲ್ಲಿ ಬೆಳೆದ ಬೆಳೆಯ ಎಲ್ಲಾ ಕರ್ಚುವೆಚ್ಚಗಳನ್ನು ತೆಗೆದು 10 ರಿಂದ 15 ಸಾವಿರ

ಆದಾಯಗಳಿಸುತ್ತಿದ್ದ ರೈತ ಕೆರೆ ನಿರ್ಮಾಣದ ಬಳಿಕ ಅದೇ ಒಂದು ಎಕರೆಯಲ್ಲಿ 25 ರಿಂದ 30 ಸಾವಿರ ಆದಾಯಗಳಿಸುತ್ತಿದ್ದಾರೆ.

ಒಟ್ಟಾರೆಯಲ್ಲಿ ಹವಾಮಾನ ಆಧಾರಿತ ಹತ್ತಿ,ಹೆಸರು,ಈರುಳ್ಳಿ, ಮೆಣಸಿನಕಾಯಿ ಬೆಳೆಯುತ್ತಿದ್ದ ರೈತ ಕೆರೆ ನಿರ್ಮಿಸಿಕೊಂಡು ಮೊದಲಿನ ಬೆಳೆಗಳೊಂದಿಗೆ ಮಾವು, ಚಿಕ್ಕು, ದಾಳಿಂಬೆಯನ್ನು ಬೆಳೆಯುತ್ತಿರುವುದು ಹೆಮ್ಮೆಯ ಸಂಗತಿ..

Edited By : Manjunath H D
Kshetra Samachara

Kshetra Samachara

25/02/2021 12:02 pm

Cinque Terre

68.45 K

Cinque Terre

5

ಸಂಬಂಧಿತ ಸುದ್ದಿ