ಪಬ್ಲಿಕ್ ನೆಕ್ಸ್ಟ್ ವಿಶೇಷ- ಈರಣ್ಣ ವಾಲಿಕಾರ
ಹುಬ್ಬಳ್ಳಿ- ಸತತವಾಗಿ ಸುರಿದ ಮಳೆಯಿಂದಾಗಿ ಬೆಳೆ ನಾಶವಾಗಿ ಕಂಗೆಟ್ಟಿದ್ದ ರೈತರಿಗೆ, ಈಗ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರವಾಹಕ್ಕೆ ಕೊಚ್ಚಿ ಹೋಗಿ ಅಳಿದುಳಿದಿದ್ದ ಈರುಳ್ಳಿಯನ್ನ ರೈತರು ಕಾಪಾಡಿಕೊಂಡಿದ್ದರು. ಆದ್ರೆ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ಈರುಳ್ಳಿ ಹೊಲದಲ್ಲಿ ಕೊಳೆತು ಹೋಗುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಮಳೆಯಲ್ಲಿ ಕೊಳೆತು ಹೋಗುತ್ತಿರೋ ಈರುಳ್ಳಿಯನ್ನು ನೋಡಿ, ಈರುಳ್ಳಿ ಬೆಳೆದ ರೈತರು ಕಣ್ಣೀರು ಹಾಕುತ್ತಿದ್ರೆ, ಮತ್ತೊಂದೆಡೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿದ್ದು ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.
ಒಂದೆ ಸಲಕ್ಕೆ ರೈತರು ಹಾಗೂ ಗ್ರಾಹಕರಿಗೆ ಈಗ ಈರುಳ್ಳಿ ಕಣ್ಣೀರು ತರಿಸುತ್ತಿದೆ. ಹೌದು,,, ಧಾರವಾಡ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ರೈತರು ಬೆಳೆದ ಈರುಳ್ಳಿ ಬೆಳೆ ಹಾನಿಗೊಳಗಾಗಿದೆ.
ಅಳುದುಳಿದ ಈರುಳ್ಳಿಯನ್ನ ಮಾರುಕಟ್ಟೆಗೆ ತಂದ್ರೆ, ಉತ್ತಮ ಬೆಲೆ ಸಿಗದೆ ರೈತರು ಪರದಾಡುತ್ತಿದ್ದಾರೆ. ಎಪಿಎಂಸಿ ಗೆ ಉತ್ತಮ ಗುಣಮಟ್ಟದ ಈರುಳ್ಳಿ ಬಾರದ ಹಿನ್ನೆಲೆ ಧೀಡರ್ ಅಂತಾ ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿದಿದ್ದು, ಈರುಳ್ಳಿ ಬೆಳೆದ ರೈತರು ಕಣ್ಣೀರು ಹಾಕುವಂತಾಗಿದೆ. ಗುಣಮಟ್ಟದ ಈರುಳ್ಳಿಗೆ ಎಪಿಎಂಸಿಯಲ್ಲಿ ಕ್ವಿಂಟಾಲಿಗೆ 5 ರಿಂದ 7 ಸಾವಿರಕ್ಕೂ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ.
ಮಳೆಯಿಂದ ಈರುಳ್ಳಿ ಗುಣಮಟ್ಟ ಕಳೆದುಕೊಂಡಿದ್ದು, ಈಗ ಎಪಿಎಂಸಿಯಲ್ಲಿ ಕ್ವಿಂಟಾಲಿಗೆ 2 ರಿಂದ 3 ಸಾವಿರ ರೂಪಾಯಿಗೆ ಮಾರಾಟವಾಗುತ್ತಿದೆ. ಇದು ಈರುಳ್ಳಿ ಬೆಳೆಗಾರರನ್ನು ದಿಕ್ಕುತೋಚದಂತೆ ಮಾಡಿದ್ದು, ಬೆಂಬಲ ಬೆಲೆಯಲ್ಲಿ ಈರುಳ್ಳಿ ಖರೀದಿಸುವಂತೆ ರೈತರು ಆಗ್ರಹಿಸುತ್ತಿದ್ದಾರೆ....
ಇನ್ನು ಈರುಳ್ಳಿ ಬೆಲೆ ನೂರರ ಗಡಿ ದಾಟಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಇವತ್ತು 100 ರಿಂದ 110 ರೂಪಾಯಿಗೆ ಒಂದು ಕೆಜಿ ಈರುಳ್ಳಿ ಮಾರಾಟವಾಗುತ್ತಿದ್ರೆ, ರೈತರಿಗೆ ಮಾತ್ರ ಉತ್ತಮ ಬೆಲೆ ಸಿಗುತ್ತಿಲ್ಲ. ಅದಕ್ಕಾ ಸರ್ಕಾರ ಬೆಳೆ ನಾಶವಾದವರನ್ನು ಸಮೀಕ್ಷೆ ಮಾಡಿ ಪರಿಹಾರ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ....
ಈರುಳ್ಳಿ ಬೆಳೆ ಹಾನಿಯಿಂದ ಜಿಲ್ಲೆಯ ಅನ್ನದಾತರು ಕಣ್ಣೀರು ಹಾಕುತ್ತಿದ್ದಾರೆ. ಈರುಳ್ಳಿಗೆ ಬೆಂಬಲ ಬೆಲೆ ಘೋಷಣೆ ಮಾಡುವ ಮೂಲಕ, ಕಣ್ಣೀರು ಹಾಕುತ್ತಿರುವ ರೈತರ ಕಣ್ಣೀರು ಒರೆಸಲು ಸರಕಾರ ಮುಂದಾಗುವ ಕೆಸಲ ಮಾಡುತ್ತದೇಯಾ? ಕಾದು ನೋಡುಬೇಕಿದೆ.......!
Kshetra Samachara
22/10/2020 09:37 pm