ಹಾವೇರಿ: ರೈತರ ಜಮೀನಿನಲ್ಲಿ ಹಾಕಿದ್ದ ತಂತಿ ಬೇಲಿಗೆ ಸಿಲುಕಿ ಕರಡಿಯೊಂದು ಪರದಾಡಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಶಿರಗೋಡ ಗ್ರಾಮದ ಬಳಿ ನಡೆದಿದೆ.
ಕರಡಿ ಕಂಡು ಗ್ರಾಮಸ್ಥರು ಆತಂಕಕ್ಕೆ ಸಿಲುಕಿದ್ದರು.ಈ ಹಿನ್ನೆಲೆಯಲ್ಲಿ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ, ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಕರಡಿಗೆ ಅರವಳಿಕೆ ಚುಚ್ಚುಮದ್ದು ನೀಡಿದ ಕರಡಿ ಸೆರೆ ಹಿಡಿದಿದ್ದಾರೆ.
ಇನ್ನೂ ಅಧಿಕಾರಿಗಳು ಚುಚ್ಚಮದ್ದು ನೀಡಿ ತಂತಿ ಬೇಲಿಯಿಂದ ಕರಡಿಯನ್ನು ರಕ್ಷಿಸಿ ಬೋನಿನಲ್ಲಿ ಹಾಕಿಕೊಂಡು ಹೋಗಿದ್ದು,ಅಧಿಕಾರಿಗಳ ಕಾರ್ಯಾಚರಣೆಯಿಂದ ಆರು ವರ್ಷದ ಹೆಣ್ಣು ಚಿರತೆ ಗದಗ ಪ್ರಾಣಿ ಸಂಗ್ರಹಾಲಯ ಸೇರಿದೆ.ಅಲ್ಲದೇ ಚಿರತೆ ಸೆರೆ ಹಿಡಿದುಕೊಂಡು ಹೋಗಿದ್ದರಿಂದ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
Kshetra Samachara
30/10/2020 10:31 pm