ಹುಬ್ಬಳ್ಳಿ- ನಿಮ್ಮ ಪ್ರೀತಿಯ ಪಬ್ಲಿಕ್ ನೆಕ್ಸ್ಟ್ ವಿಜಯದಶಮಿ ಅಂಗವಾಗಿ ನವರಂಗ್ ಎಂಬ ಸ್ಪರ್ಧೆಯನ್ನು ಏರ್ಪಡಿಸಿತ್ತು. ಈ ಸ್ಪರ್ಧೆಗೆ ಅವಳಿನಗರದ ಮಹಿಳೆಯರು ಆಸಕ್ತಿಯಿಂದ ಪಾಲ್ಗೊಂಡಿದ್ದರು.
ಇದರಲ್ಲಿ ವಿಜೇತರಾದ ಸುಂದರಿಯರ ಹೆಸರುಗಳನ್ನು ನಿಮ್ಮ ಪಬ್ಲಿಕ್ ನೆಕ್ಸ್ಟ್ ಕಳೆದ ಬುಧವಾರ ಪ್ರಕಟಿಸಿತ್ತು. ಅದರಂತೆ ವಿಜೇತರಿಗೆ ಇಂದು ಬಹುಮಾನ ವಿತರಿಸಲಾಗಿದೆ.
ಹುಬ್ಬಳ್ಳಿಯ ಎಸ್ ಟಿ ಭಂಡಾರಿ &ಸನ್ಸ್ ಸಿಲ್ಕ್ & ಸ್ಯಾರೀಸ್ ಮಳಿಗೆಯವರು ಇದಕ್ಕೆ ಉತ್ಸುಕರಾಗಿ ಪ್ರಾಯೋಜಕತ್ವ ನೀಡಿದ್ದರು. ಎಸ್ ಟಿ ಭಂಡಾರಿ ಸಿಲ್ಕ್ ಸ್ಯಾರೀಸ್ ಮಳಿಗೆ ಹಾಗೂ ಪಬ್ಲಿಕ್ ನೆಕ್ಸ್ಟ್ ಮಾಡಿದ ಈ ಕೆಲಸಕ್ಕೆ ವಿಜೇತರು ಹಾಗೂ ಪಾಲ್ಗೊಂಡ ಎಲ್ಲ ಮಹಿಳೆಯರಿಂದ ಸಕಾರಾತ್ಮಕ ಅಭಿಪ್ರಾಯ ಕೇಳಿ ಬಂದಿದೆ.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಹಿಳಾಮಣಿಗಳಿಗೆ ಎಸ್ ಟಿ ಭಂಡಾರಿ ಸಿಲ್ಕ್ & ಸ್ಯಾರೀಸ್ ಹಾಗೂ ಪಬ್ಲಿಕ್ ನೆಕ್ಸ್ಟ್ ಧನ್ಯವಾದ ತಿಳಿಸುತ್ತದೆ.
ಇಂದು ಎಸ್ ಟಿ ಭಂಡಾರಿ ಸಿಲ್ಕ್ & ಸ್ಯಾರೀಸ್ ಪ್ರಾಯೋಜಕತ್ವದ ಬಹುಮಾನ ಪಡೆದ ವಿಜೇತ ಮಹಿಳೆಯರು ಪಬ್ಲಿಕ್ ನೆಕ್ಸ್ಟ್ ಮಾಡಿದ ಈ ಕಾರ್ಯದ ಬಗ್ಗೆ ಹೇಳಿದ್ದು ಹೀಗೆ..
Kshetra Samachara
30/10/2020 09:21 pm