ನವಲಗುಂದ: ಅಣ್ಣಿಗೇರಿ ಹಾಗೂ ಕುಂದಗೋಳ ತಾಲೂಕುಗಳಲ್ಲಿ ಜಾನುವಾರುಗಳಿಗೆ ಇತ್ತೀಚಿಗೆ ಚರ್ಮ ಹಾಗೂ ಗಂಟು ರೋಗದ ಭಾದೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರೋದು ಈಗ ರೈತನ ನಿದ್ದೆಗೆಡಿಸಿದೆ. ಅತಿವೃಷ್ಠಿಯಿಂದ ಕಂಗಾಲಾದ ರೈತರಿಗೆ ಈಗ ಹಸು ಮತ್ತು ಎತ್ತುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಚರ್ಮ ಹಾಗೂ ಗಂಟು ರೋಗದ ಭಾದೆ ಸಂಕಷ್ಟಕ್ಕೆ ದೂಡಿದೆ.
ಚರ್ಮ ಹಾಗೂ ಗಂಟು ರೋಗದ ಭಾದೆ ನವಲಗುಂದ ಭಾಗದಲ್ಲಿ ಹೆಚ್ಚಾಗಿ ಕಾಣದೆ ಇರೋದು ಈ ಭಾಗದ ರೈತರಿಗೆ ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಈ ಹಿನ್ನೆಲೆ ನವಲಗುಂದ ಪಶು ಆಸ್ಪತ್ರೆ ವತಿಯಿಂದ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಹಾಗೂ ಹೇಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ನವಲಗುಂದ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರಾದ ಡಾ. ಆರ್ ವಿ ಕೊಟ್ಟೂರ ತಿಳಿಸಿದ್ದು ಹೀಗೆ.
Kshetra Samachara
30/09/2022 09:38 pm