ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಜಾನುವಾರು ಚರ್ಮಗಂಟು ರೋಗಕ್ಕೆ ಸಲಹೆ ಇಲ್ಲಿದೆ

ಕುಂದಗೋಳ: ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಜಾನುವಾರುಗಳಿಗೆ ಚರ್ಮ ಗಂಟು ರೋಗ ಹೆಚ್ಚಾಗಿ ಬಾಧಿಸುತ್ತಿದ್ದು, ಆಸ್ಪತ್ರೆ ಅರಸಿ ಬರುವ ಜಾನುವಾರುಗಳ ಸಂಖ್ಯೆ ಸಹ ಹೆಚ್ಚುತ್ತಿದೆ.

ಈಗಾಗಲೇ ಕುಂದಗೋಳ ತಾಲೂಕಿನ 25 ಹಳ್ಳಿಗಳಲ್ಲಿ ಹೆಚ್ಚಾಗಿ ಜಾನುವಾರುಗಳ ಚರ್ಮ ಗಂಟು ರೋಗ ಹರಡಿದ್ದು, ಅದರಲ್ಲಿ 304 ಜಾನುವಾರುಗಳು ರೋಗಕ್ಕೆ ತುತ್ತಾಗಿದ್ದು, ಅವುಗಳಲ್ಲಿ 13 ಎಮ್ಮೆ ಸಹ ಸೇರಿವೆ. ಇದೀಗ ಏಳರಿಂದ ಎಂಟು ಹಳ್ಳಿಗಳಲ್ಲಿ ರೋಗ ಹತೋಟಿಗೆ ಬಂದಿದೆ.

ಆ ನಿಟ್ಟಿನಲ್ಲಿ ಕುಂದಗೋಳ ಪಶು ಆಸ್ಪತ್ರೆ ವೈದ್ಯರು ಜಾನುವಾರುಗಳಿಗೆ ಉಂಟಾದ ಗಂಟು ರೋಗದ ಬಗ್ಗೆ ಕೈಗೊಳ್ಳಬೇಕಾದ ಎಚ್ಚರಿಕೆ ಹಾಗೂ ಮುನ್ನೆಚ್ಚರಿಕೆಯ ಕ್ರಮ ಸೇರಿದಂತೆ ಯಾವ ರೀತಿಯಲ್ಲಿ ಔಷಧಿ ಉಪಚಾರ ಮಾಡಬೇಕು ಯಾವಾಗ ವೈದ್ಯರನ್ನು ಕಾಣಬೇಕು ಎಂಬಿತ್ಯಾದಿ ಮಾಹಿತಿಯನ್ನು ಪಶು ವೈದ್ಯ ಮಂಜುನಾಥ ಅವರು ಪಬ್ಲಿಕ್ ನೆಕ್ಸ್ಟ್ ಜೊತೆ ಹಂಚಿಕೊಂಡಿದ್ದು ರೈತರಿಗೆ ಈ ಮಾಹಿತಿ ವರದಾನವಾಗಲಿದೆ.

Edited By : Shivu K
Kshetra Samachara

Kshetra Samachara

28/09/2022 10:35 pm

Cinque Terre

37.65 K

Cinque Terre

1

ಸಂಬಂಧಿತ ಸುದ್ದಿ