ಹುಬ್ಬಳ್ಳಿ: ನಮಸ್ಕಾರ ರೀ ಹುಬ್ಬಳ್ಳಿ ಮಂದಿಗೆ ಪಬ್ಲಿಕ್ ನೆಕ್ಸ್ಟ್ ಮಾಧ್ಯಮದಾಗ ಸಾಕಷ್ಟು ಸುದ್ಧಿ ನೋಡಿ ಖುಷ್ ಆಗಿರೀ. ಹಂಗ ಈಗ ಜೀವನದಾಗ ಖುಷ್ ಖುಷ್ ಆಗಿ ಇರಬೇಕ ಅಂದ್ರ ನಿಮ್ಮ ಆರೋಗ್ಯನೂ ಮಸ್ತ್ ಇರಬೇಕಲೇಸ್ರಿ.. ಹಂಗಿದ್ರ ನಾಳೆ ಗೋಕುಲ ರೋಡ್ ಜೈಂಟ್ಸ್ ಸ್ಕೂಲ್ ಒಳಗ ಹೆಲ್ತ್ ಕ್ಯಾಂಪ್ ಐತಿ ಬಿಡುವ ಮಾಡ್ಕೊಂಡು ಬಂದು ಹೋಗ್ರಿ ಮತ್ತ್..
ಕರೇ ರೀ..ಹುಬ್ಬಳ್ಳಿ ಜನರಿಗೆ ಜೈಂಟ್ಸ್ ಗ್ರೂಪ್ ಆಫ್ ಹುಬ್ಬಳ್ಳಿ ಸಿಟಿ ಮತ್ತ ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ಸಹಯೋಗದಾಗ ಈ ಹೆಲ್ತ್ ಕ್ಯಾಂಪ್ ಆಯೋಜನೆ ಮಾಡ್ಯಾರ. ಆದರ ಈ ಹೆಲ್ತ್ ಕ್ಯಾಂಪ್ ಒಳಗ ಏನ ಇರತೈತಿ.ಯಾವ ಯಾವ ಡಾಕ್ಟರ್ ಬರ್ತಾರ ಅಂತ ವಿಚಾರ ಮಾಡಕುಂತಿರಿ ಹಾಗಿದ್ದರೇ ಕೇಳ್ರಿ ಹೇಳ್ತಿವಿ...
ಡಾ. ಜಿ.ಆರ್.ರಾಯಜಿ, ಡಾ. ಮನೋಜ ಎಂ.ಭಟ್, ಡಾ. ಪ್ರಕಾಶ ಬೆರನೂರ, ಡಾ.ಪೂಜಾ ಪಾಟೀಲ, ಡಾ. ಪವನ ಜೋಶಿ, ಡಾ.ಕಿರಣ ನಿಲುಗಲ್, ಡಾ.ಎಸ್.ಎ.ಪಾಟೀಲ, ಡಾ.ಶೋಭಾ ಎಸ್.ಪಾಟೀಲ, ಡಾ.ಎಸ್.ಆರ್.ಹನುಮರೆಡ್ಡಿ, ಡಾ.ವಿಜಯಲಕ್ಷ್ಮಿ ರಾಠೋಡ, ಡಾ.ಅನುಷಾ, ಡಾ.ವಿದ್ಯಾ ಶಿವಪುರ, ಡಾ.ಸನ್ನಿದಿ ಹೆಗ್ಡೆ, ಡಾ.ವಿಜಯ ರಾಠೋಡ ಇಷ್ಟ ಜನ ಡಾಕ್ಟರ್ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸೊಕೆ ಬರ್ತಾರೆ ನೋಡ್ರಿ.
ಇನ್ನ ಈ ದೊಡ್ಡ ಹೆಲ್ತ್ ಕ್ಯಾಂಪ್ ಗೆ ಮಹೇಶ ಫಾರ್ಮಾ, ಡಾ.ಅಗರ್ವಾಲ್ಸ್ ಐ ಹಾಸ್ಪಿಟಲ್, ಶ್ರೀ ಕಾಮಾಕ್ಷಿ ಡೆಂಟಲ್ ಕ್ಲಿನಿಕ್, ನಾರಾಯಣ ಹಾರ್ಟ್ ಸೆಂಟರ್, ಅಮೋಘ ಎಂಟರ್ಪ್ರೈಸ್(ಎಸಿ, ವಾಟರ್ ಪಿಲ್ಟರ್ ಡೀಲರ್), ಓಂಕಾರ್ ಲ್ಯಾಬೋರೇಟರಿ ಹಿಂಗ್ ಸುಮಾರು ಸಂಘ ಸಂಸ್ಥೆಗಳು ಸಹಕಾರ ನೀಡ್ಯಾರ ನೋಡ್ರಿ. ಮತ್ತ ತಡಾ ಯಾಕ್ ಮಾಡತ್ತೀರಿ ನೀವು ಮತ್ತ ನಿಮ್ಮ ನೆರೆ ಹೊರೆ ಮನ್ಯಾವರನ್ನು ಕರೆದುಕೊಂಡು ಬರ್ರಿ ಆರೋಗ್ಯ ತಪಾಸಣೆ ಮಾಡಿಸ್ಕೋರಿ…
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/09/2022 04:22 pm