ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆರೋಗ್ಯವಂತ ಮಗುವಿನ ಬೆಳವಣಿಗೆಗಾಗಿ ಸ್ತನ್ಯಪಾನ ಸಪ್ತಾಹ

ಧಾರವಾಡ. ಅಮೇರಿಕನ್ ಇಂಡಿಯಾ ಫೌಂಡೇಶನ್ ಹಾಗೂ ವೇದಾಂತ ಫೌಂಡೇಶನ್ ನಂದಘರ ಅಂಗನವಾಡಿ ಕೇಂದ್ರ ತೋರಿಸಿಕೊಟ್ಟ ಇವರ ಸಹಯೋಗದಲ್ಲಿ ಗರ್ಭಿಣಿ, ಬಾಣಂತಿಯರಿಗೆ ಮಗುವಿನ ಆರೈಕೆ ಮತ್ತು ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಹಮ್ಮಿಕ್ಕೊಳ್ಳಲಾಯಿತು.

ಸಮುದಾಯ ಆರೋಗ್ಯ ಅಧಿಕಾರಿ ಸುಕನ್ಯಾ ಇವರು ಮಾತನಾಡಿ ಸ್ತನ್ಯಪಾನದ ಮಹತ್ವ ಹಾಗೂ ಇದರಿಂದ ತಾಯಿ ಮತ್ತು ಮಗುವಿಗೆ ಆಗುವ ಉಪಯೋಗಗಳನ್ನು ತಿಳಿಸಿಕೊಟ್ಟರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಜೆ.ಎಸ್ ಬಡಿಗೇರ ಮಾತನಾಡಿ ಮಗುವಿನ ಪೌಷ್ಟಿಕ ಆಹಾರ ತಯಾರಿಸುವ ವಿಧಾನಗಳ ಕುರಿತು ತಿಳಿಸಿದರು.

ನಂದಘರ ಯೋಜನೆಯ ಜಿಲ್ಲಾ ಸಂಯೋಜಕಿ ರೂಪಾಯಿ ನಾಯಕ ಮಾತನಾಡಿ ಮಗುವಿನ ಆರೈಕೆ ಮತ್ತು ಬೆಳವಣಿಗೆ ಕುರಿತು ಸಲಹೆ ನೀಡಿದರು, ಅಂಗನವಾಡಿ ವ್ಯಾಪ್ತಿಯೋಳಗಿನ 0 ರಿಂದ 1 ವರ್ಷದೊಳಗಿನ 10 ಮಕ್ಕಳ ಆರೋಗ್ಯ ತಪಾಸಣೆ ಮಾಡಿ ಅತ್ಯುತ್ತಮ ಆರೋಗ್ಯವಂತ 1 ಮಗುವನ್ನು ಗುರುತಿಸಿ ಬಹುಮಾನ ವಿತರಿಸಿ ಪ್ರೋತ್ಸಾಹಿಸಿಲಾಯಿತು.

ಕಾರ್ಯಕ್ರಮದಲ್ಲಿ ಕ್ಷೇತ್ರ ಸಂಯೋಜಕ ನಾಗರಾಜ ಕೊಟಗಾರ್,ಮಲ್ಲನಗೌಡ ಕಾಳಗೌರ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಗರ್ಭಿಣಿಯರು, ಬಾಣಂತಿಯರು ಭಾಗವಹಿಸಿದ್ದರು.

Edited By : Nirmala Aralikatti
Kshetra Samachara

Kshetra Samachara

09/08/2022 10:36 pm

Cinque Terre

12.05 K

Cinque Terre

0

ಸಂಬಂಧಿತ ಸುದ್ದಿ