ಧಾರವಾಡ :ಮಕ್ಕಳ ಪುಟ್ಟ ಹೃದಯದಲ್ಲಿ ಎಂದಾದರೂ ಕಲ್ಮಷ ಇರಲು ಸಾಧ್ಯವೇ ಇಲ್ಲ. ಇಲ್ಲ ಬಿಡಿ. ಮಕ್ಕಳನ್ನ ನಾವು-ನೀವೂ ದೇವರು ಅಂತಲೇ ಕರೆಯುತ್ತೇವೆ. ಇಂತಹ ದೇವರ ಹೃದಯದಲ್ಲೂ ತೊಂದರೆ ಇರುತ್ತದೆ ಅಂದ್ರೆ ನೀವೂ ನಂಬ್ತೀರಾ ? ಇಲ್ಲಾ ಅಲ್ವೇ. ಆದರೆ, ಹುಟ್ಟಿದ ಮಕ್ಕಳ ಹೃದಯದಲ್ಲೂ ಈಗ ತೊಂದರೆ ಕಾಣಿಸಿಕೊಳ್ಳುತ್ತದೆ. ಅಂತಹ ಮಕ್ಕಳ ತೊಂದರೆಗೆ ಸಂಜೀವಿನಿ ಥರ ಕೆಲಸ ಮಾಡೋ ಸೆಂಟರ್ ನಮಲ್ಲಿಯೇ ಇದೆ. ಅದುವೇ ಧಾರವಾಡ ಸತ್ತೂರಿನ ಎಸ್‌ಡಿಎಂ ನಾರಾಯಣ ಹಾರ್ಟ್ ಕೇರ್ ಸೆಂಟರ್.
ಹೌದು. ಎಸ್.ಡಿ.ಎಂ ನಾರಾಯಣ ಹಾರ್ಟ್ ಕೇರ್ ಸೆಂಟರ್ ಅತ್ಯಾಧುನಿಕವಾಗಿಯೇ ಇದೆ. ನಿಮ್ಮ ಹೃದಯ ನಮ್ಮ ಕಾಳಜಿ ಅಂತಲೇ ತನ್ಮಯತೆಯಿಂದಲೇ ಕೆಲಸ ಮಾಡುತ್ತಿದೆ. ಮಕ್ಕಳ ಹೃದಯವನ್ನ ರಕ್ಷಿಸೋ ಪಣ ತೊಟ್ಟವರ ಹಾಗೇನೆ ಇಲ್ಲಿಯ ತಜ್ಞ ವೈದ್ಯರು ನಿರಂತರಾಗಿಯೇ ಸೇವೆ ಒದಗಿಸುತ್ತಿದ್ದಾರೆ.
ಮಕ್ಕಳಲ್ಲಿ ಕಂಡು ಬರುವ ಹೃದಯ ತೊಂದರೆಗೆ ಚಿಕಿತ್ಸೆ ಇದೆ. ಪೋಷಕರು ಸೂಕ್ತ ಸಮಯಕ್ಕೆ ಶಸ್ತ್ರ ಚಿಕಿತ್ಸೆ ಮಾಡಿಸೋಕೆ ಮನಸ್ಸು ಮಾಡಬೇಕು. ಇಂತಹ ತೊಂದರೆ ಇರೋ ಮಕ್ಕಳನ್ನ ಹುಟ್ಟಿದ ಒಂದು ವರ್ಷದೊಳಗೆ ಸರಿಯಾದ ಶಸ್ತ್ರ ಚಿಕಿತ್ಸೆ ಮಾಡಿದರೆ ಸಾಕು. ಎಲ್ಲ ಮಕ್ಕಳ ಹಾಗೆ ಈ ಮಕ್ಕಳು ಜೀವನ ನಡೆಸಬಹುದು.
ಇಂತಹ ಮಕ್ಕಳ ಚಿಕಿತ್ಸೆಗಾಗಿಯೇ ಸತ್ತೂರಿನಲ್ಲಿರೋ ಎಸ್‌ಡಿಎಂ ನಾರಾಯಣ ಹಾರ್ಟ್ ಕೇರ್ ಸೆಂಟರ್ ಇದೆ. ಇಲ್ಲಿ ಮಕ್ಕಳ ತಜ್ಞರು ಹೃದಯ ತಜ್ಞರೂ ಇದ್ದಾರೆ. ಅತ್ಯಾಧುನಿಕ ಉಪಕರಣಗಳೂ ಇಲ್ಲಿವೆ. ಅತ್ಯಾಧುನಿಕ ICU ಕೂಡ ಇಲ್ಲಿದೆ. ಅದನ್ನ ನೋಡಿಕೊಳ್ಳುವ ನುರಿತ ತಂಡವೂ ಇಲ್ಲಿರೋದು ವಿಶೇಷ. ಶಸ್ತ್ರ ಚಿಕಿತ್ಸೆ ಮಾಡಲು ಬೇಕಾಗೋ ಅರವಳಿಕೆಯ ತಜ್ಞರು ಇಲ್ಲಿದ್ದಾರ.
ಆರ್ಥಿಕವಾಗಿ ಮಕ್ಕಳ ಪೋಷಕರಿಗೆ ನೆರವಾಗಲು ಎಲ್ಲ ರೀತಿಯ ಇನ್ಸೂರೆನ್ಸ್ ವ್ಯವಸ್ಥೆ ಈ ಸೆಂಟರ್ ನಲ್ಲಿದೆ. ಸ್ಕೀಮ್ ಬೆನಿಫಿಟ್ಸ್ ದೊರೆಯುತ್ತದೆ. .
ಮಕ್ಕಳ ಪೋಷಕರು ಈ ಒಂದು ವ್ಯವಸ್ಥೆಯ ಉಪಯೋಗ ತೆಗೆದುಕೊಳ್ಳಬೇಕು ಎಂದು ಡಾ.ರವಿವರ್ಮ ಜಿ.ಪಾಟೀಲ್, ಹಿರಿಯ ಮುಖ್ಯ ಹೃದಯ ಶಸ್ತ್ರ ಚಿಕಿತ್ಸಕರು (ವಯಸ್ಕರು ಹಾಗೂ ಮಕ್ಕಳ ವಿಭಾಗ) ಹೇಳಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/06/2022 05:11 pm