ನವಲಗುಂದ : ಗುರುವಾರ ಪಟ್ಟಣದ ಗವಿ ಮಠದಲ್ಲಿ ಕಾರ್ಮಿಕರಿಗೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರ ನೇತೃತ್ವದಲ್ಲಿ ಚಾಲನೆಗೊಂಡ ಸಂಚಾರಿ ಚಿಕಿತ್ಸಾ ಘಟಕಗಳ ಮೂಲಕ ಉಚಿತ ಚಿಕಿತ್ಸೆಯನ್ನು ನೀಡಲಾಯಿತು.
ಇನ್ನು ಪ್ರತಿ ಗುರುವಾರ ನವಲಗುಂದ ಅಣ್ಣಿಗೇರಿ ವ್ಯಾಪ್ತಿಯಲ್ಲಿ ಸಂಚಾರಿ ಚಿಕಿತ್ಸಾ ಘಟಕಗಳ ಮೂಲಕ ಕಾರ್ಮಿಕರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಈ ಬಗ್ಗೆ ಹುಬ್ಬಳ್ಳಿಯ ಹಿರಿಯ ಕಾರ್ಮಿಕ ನಿರೀಕ್ಷಿಕರಾದ ಅಕ್ರಮ್ ಅಲ್ಲಾಪುರ ಅವರು ತಿಳಿಸಿದರು.
Kshetra Samachara
04/02/2022 05:32 pm