ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕ್ಯಾನ್ಸರ್‌ಗೆ ಕಡಿವಾಣ ಹಾಕಲು ಸಜ್ಜಾಗಿದೆ ರೆಡಾನ್ ಆಸ್ಪತ್ರೆ

ಹುಬ್ಬಳ್ಳಿ: ಕ್ಯಾನ್ಸರ್ ಎಂದರೆ ಇಂದಿಗೂ ಎಲ್ಲರೂ ಭಯಭೀತಿಗೊಳ್ಳುತ್ತಾರೆ. ಕ್ಯಾನ್ಸರ್ ಬಂದರೆ ಯಾರೂ ಬದುಕುಳಿಯೋದಿಲ್ಲ ಎಂಬ ಕಾಲಘಟ್ಟದಲ್ಲಿ ಕ್ಯಾನ್ಸರ್ ತಗುಲಿದ ಅನೇಕರಿಗೆ ಮರುಜನ್ಮ ನೀಡಿದೆ ಹುಬ್ಬಳ್ಳಿಯ ರೆಡಾನ್ ಆಸ್ಪತ್ರೆ.

ವಿಶ್ವ ಕ್ಯಾನ್ಸರ್ ದಿನಾಚರಣೆಯನ್ನು ಪ್ರತಿವರ್ಷ ಫೆ.4 ರಂದು ಆಚರಿಸಲಾಗುತ್ತಿದೆ. ಮೊದಲ ಹಂತದಲ್ಲೇ ಕ್ಯಾನ್ಸರ್ ಗುರುತಿಸಿದರೆ ಅದನ್ನು ತಡೆಗಟ್ಟಬಹುದು. ಅಲ್ಲದೇ ಕ್ಯಾನ್ಸರ್ ಬರುವ ಮುನ್ಸೂಚನೆ ಇದ್ದರೆ ಸಾವಿನ ದವಡೆಯಿಂದ ಅಂತಹ ವ್ಯಕ್ತಿಯನ್ನು ಪಾರು ಮಾಡಬಹುದು ಎಂಬುದನ್ನು ರೆಡಾನ್ ಆಸ್ಪತ್ರೆ ನುರಿತ ವೈದ್ಯಾಧಿಕಾರಿಗಳು ಹೇಳುತ್ತಾರೆ. ಮದ್ಯಪಾನ ಹಾಗೂ ಧೂಮಪಾನ ನಿಲ್ಲಿಸಿದರೆ ಶೇ.30 ರಷ್ಟು ಕ್ಯಾನ್ಸರ್ ರೋಗವನ್ನು ತಡೆಗಟ್ಟಬಹುದು. ಅನೇಕ ವಿಶೇಷತೆಗಳನ್ನು ಹೊಂದಿ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಉತ್ತಮ ವೈದ್ಯಕೀಯ ಸೇವೆ ನೀಡಲು ಸಿದ್ಧವಾಗಿದೆ ಈ ರೆಡಾನ್ ಆಸ್ಪತ್ರೆ. ಬನ್ನಿ ಹಾಗಾದ್ರೆ ಈ ಆಸ್ಪತ್ರೆಯಲ್ಲಿ ಯಾವೆಲ್ಲ ಸೌಲಭ್ಯ ಇವೆ ಎಂಬುದರ ಬಗ್ಗೆ ಮುಖ್ಯ ವೈದ್ಯಾಧಿಕಾರಿಗಳೇ ಹೇಳುತ್ತಾರೆ ಕೇಳೋಣ ಬನ್ನಿ

ಕಳೆದ ನಾಲ್ಕು ವರ್ಷಗಳಿಂದ ಉತ್ತರ ಕರ್ನಾಟಕ ಭಾಗದ ಜನರಿಗೆ ರೆಡಿಯೇಶನ್ ಥೆರಫಿ, ವಿಕಿರಣ ಚಿಕಿತ್ಸೆಯ ಸೌಲಭ್ಯವನ್ನು ಆಸ್ಪತ್ರೆ ನೀಡುತ್ತಿದೆ. ಬದಲಾಗುತ್ತಿರುವ ದಿನಗಳಲ್ಲಿ ಕ್ಯಾನ್ಸರ್‌ನ್ನು ಮೊದಲ ಹಂತದಲ್ಲೇ ಕಟ್ಟಿಹಾಕಬಹುದು ಎಂಬುದನ್ನು ಈ ರೆಡಾನ್ ಆಸ್ಪತ್ರೆ ಇದೀಗ ತೋರಿಸಿಕೊಟ್ಟಿದೆ. ಅನೇಕ ರೋಗಿಗಳು ಇಲ್ಲಿ ಮೊದಲ ಹಂತದಲ್ಲೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಮೆಟ್ರೊ ಸಿಟಿಯಲ್ಲಿ ಸಿಗುವ ವೈದ್ಯಕೀಯ ಸೌಲಭ್ಯವನ್ನು ಸುಲಭವಾಗಿ ಉತ್ತರ ಕರ್ನಾಟಕ ಭಾಗದ ಜನತೆಗೆ ಹುಬ್ಬಳ್ಳಿಯ ಈ ರೆಡಾನ್ ಸಂಸ್ಥೆ ಒದಗಿಸುತ್ತಿದೆ.

ಕ್ಯಾನ್ಸರ್ ಮೊದಲ ಹಂತದಲ್ಲಿ ಇದ್ದಾಗಲೇ ವಿಕಿರಣದಿಂದ ಎಲ್ಲಾ ತರಹದ ಕ್ಯಾನ್ಸರ್‌ಗೆ ಸುಲಭವಾಗಿ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉತ್ತಮ ಶಸ್ತ್ರ ಚಿಕಿತ್ಸಾ ವಿಭಾಗ ಸೇರಿದಂತೆ ಅತ್ಯಾಧುನಿಕ ವಾರ್ಡ್ ಸೌಲಭ್ಯವನ್ನೂ ಈ ಆಸ್ಪತ್ರೆ ಹೊಂದಿದೆ. ಮುಖ್ಯವಾಗಿ ಹೊಸ ತಂತ್ರಜ್ಞಾನವಾದ ಕಿಮೊ ಥೆರಫಿಯನ್ನು ಈ ಆಸ್ಪತ್ರೆ ಹೊಂದಿದ್ದು, ಕ್ಯಾನ್ಸರ್ ರೋಗಿಗಳಿಗೆ ಸಂಜೀವಿನಿಯಾಗಿ ಮಾರ್ಪಟ್ಟಿದೆ.

ಏನೇ ಆಗಲಿ ಮಾರಕವಾಗಿ ಬೆಳೆಯುತ್ತಿರುವ ಕ್ಯಾನ್ಸರ್ ರೋಗ ಇದೀಗ ಸಾಮಾನ್ಯವಾಗಿಬಿಟ್ಟಿದೆ. ಆದರೆ, ಕ್ಯಾನ್ಸರ್‌ ರೋಗವನ್ನು ಮೊದಲ ಹಂತದಲ್ಲೇ ಗುರುತಿಸಿದರೆ ಅದನ್ನು ಸಂಪೂರ್ಣವಾಗಿ ತಡೆಗಟ್ಟಿ ಆ ರೋಗಿಯನ್ನು ಅದರಿಂದ ಕಾಪಾಡಬಹುದು ಎಂಬುದನ್ನು ಈ ಆಸ್ಪತ್ರೆ ಸಾಬೀತುಪಡಿಸಿದೆ. ಉತ್ತರ ಕರ್ನಾಟಕ ಭಾಗದ ಜನತೆಗೆ ಈ ಆಸ್ಪತ್ರೆ ದೊಡ್ಡ ಸಂಜೀವಿನಿಯಾಗಿ ಮಾರ್ಪಟ್ಟಿದ್ದು, ಕ್ಯಾನ್ಸರ್‌ ರೋಗಿಗಳು ಈ ಸೌಲಭ್ಯಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ವಿಳಾಸ: #65, ಜವಳಿ ಗಾರ್ಡನ್, ಎಂ.ಟಿ.ಸಾಗರ, ಗೋಕುಲ ರೋಡ್, ಹುಬ್ಬಳ್ಳಿ, 580030

ದೂರವಾಣಿ ಸಂಖ್ಯೆ-0836-2335925 ಅಥವಾ 2239619

Edited By : Shivu K
Kshetra Samachara

Kshetra Samachara

04/02/2022 11:27 am

Cinque Terre

30.8 K

Cinque Terre

3

ಸಂಬಂಧಿತ ಸುದ್ದಿ