ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದಲ್ಲಿ ನವೀಕೃತಗೊಂಡ 1951ರ ಕಟ್ಟಡ

ಧಾರವಾಡ: ಧಾರವಾಡದ ಬಸ್‌ ನಿಲ್ದಾಣದ ಬಳಿ 1951ರಲ್ಲಿ ನಿರ್ಮಾಣಗೊಂಡಿದ್ದ ಮುನ್ಸಿಪಾರ್ಟಿ ಆಸ್ಪತ್ರೆ ಇದೀಗ ದುರಸ್ತಿಗೊಂಡು ಮತ್ತೆ ಸಾರ್ವಜನಿಕರ ಸೇವೆಗೆ ಮುಂದಾಗಿದೆ.

ಹೌದು! ಅನೇಕ ವರ್ಷಗಳ ಕಾಲ ಈ ಆಸ್ಪತ್ರೆ ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡಿತ್ತು. ಅಲ್ಲದೇ ಹೆರಿಗೆ ಆಸ್ಪತ್ರೆ ಎಂದೇ ಖ್ಯಾತಿ ಪಡೆದಿತ್ತು. ಇತ್ತೀಚೆಗೆ ಆಸ್ಪತ್ರೆ ಕಟ್ಟಡ ಹಾಳಾಗಿ ತೀವ್ರ ತೊಂದರೆ ಉಂಟಾಗಿತ್ತು. ಇದೀಗ ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ, ರೋಟರಿ ಕ್ಲಬ್ ಹಾಗೂ ದೇಶಪಾಂಡೆ ಫೌಂಡೇಶನ್ ಸಹಯೋಗದೊಂದಿಗೆ ಈ ಆಸ್ಪತ್ರೆ ಕಟ್ಟಡ ನವೀಕೃತಗೊಂಡಿದ್ದು, ಮತ್ತೆ ಸಾರ್ವಜನಿಕರಿಗೆ ಸೇವೆ ನೀಡಲು ಮುಂದಾಗಿದೆ. ಈ ನವೀಕೃತ ಕಟ್ಟಡವನ್ನು ಶಾಸಕ ಅರವಿಂದ ಬೆಲ್ಲದ ಅವರು ಶನಿವಾರ ಉದ್ಘಾಟಿಸಿದರು.

ಸಾರ್ವಜನಿಕರಿಗೆ ಈ ಆಸ್ಪತ್ರೆಯಿಂದಲೂ ಆರೋಗ್ಯ ಸೇವೆ ಸಿಗಲಿ ಎಂಬ ಉದ್ದೇಶದಿಂದ ಹಳೇ ಕಟ್ಟಡವನ್ನು ನವೀಕರಣಗೊಳಿಸಿ ಸುಸಜ್ಜಿತ ಆಸ್ಪತ್ರೆಯನ್ನಾಗಿ ಮಾಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕರು ಇದೇ ಸಂದರ್ಭದಲ್ಲಿ ತಿಳಿಸಿದರು.

Edited By : Nagesh Gaonkar
Kshetra Samachara

Kshetra Samachara

02/10/2021 03:28 pm

Cinque Terre

34.1 K

Cinque Terre

0

ಸಂಬಂಧಿತ ಸುದ್ದಿ