ಕುಂದಗೋಳ : ಪಟ್ಟಣದ ತಾಲೂಕು ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳಿಗೆ ಆಸ್ಪತ್ರೆ ಒಳಗ್ ಕುಡ್ಯಾಕ್ ನೀರು ರೋಗಿಗಳಿಗೆ ಮಲಗಲು ಹಾಸಿಕೊಳ್ಳಲು ಬೆಡ್ ಶೀಟ್ ಕೊಟ್ಟಾಲ್ಲಂತ ಮತ್ತ್ ಶೌಚಾಲಯದ ವ್ಯವಸ್ಥೆ ಸರಿಯಿಲ್ಲಂತ ಕೇಳ್ರಪ್ಪೋ ಕೇಳ್ರಿ.
ಕೇಳಿದ್ರಲ್ಲಾ ! ಬರೋಬ್ಬರಿ 100 ಬೆಡ್ ಹೊಂದಿರುವ ಕುಂದಗೋಳ ತಾಲೂಕ ಆಸ್ಪತ್ರೆ ಒಳಗ್ ಈಗಾಗಲೇ ದಾಖಲಾಗಿರುವ ಎಲ್ಲಾ ರೋಗಿಗಳಿಗೂ ಬೆಡ್ ಮ್ಯಾಲ್ ಹಾಸಾಕ್ ಇಲ್ಲಿನ ಆಡಳಿತ ವ್ಯವಸ್ಥೆ ಒಂದು ಬೆಡ್ ಶೀಟ್ ಕೊಟ್ಟಿಲ್ಲಂತ, ಕುಡ್ಯಾಕ್ ನೀರು ಬೇಕ್ ಅಂದ್ರೆ ರಾತ್ರಿ ಹಗಲು ಎನ್ನದೇ ರೋಗಿ ಹಾಗೂ ರೋಗಿ ಸಂಬಂಧಿಗಳು ಹೊರಗೆ ಹೋಗೆ ನೀರು ತರ್ಬೇಕು, ಆ ಮ್ಯಾಲ್ ಈ ಶೌಚಾಲಯ ಚೀ ಚೀ ನೀರು ಗಲೀಜು ತುಂಬಿ ಹೊರಗ ಬಂದೈತಿ ಆ ವಿಡಿಯೋ ಮಾಡಾಕ್ ನಮ್ಗೆ ಆಗಿಲ್ಲ ಅಷ್ಟ್ ಗಬ್ಬ ಎದ್ದವು, ಇದಿಷ್ಟಲ್ಲದ ಆಸ್ಪತ್ರೆಗೆ ಅಡ್ಮೀಟ್ ಆದ್ ಪೇಶೆಂಟಿಗೆ ಹೆಚ್ಚಿದ್ದ ಸಲಾಯನ್ ಬಾಟ್ಲಿ, ಪೇಶೆಂಟ್ ಮನಿ ಮುಟ್ಟಿ ಆರಾಮ್ ಆದ್ರೂ ಆ ಸಲಯಾನ್ ಬಾಟಲಿ ಇನ್ನೂ ಅದೆ ಬೆಡ್ ಕೆಳಗೆ ಮ್ಯಾಲ್ ಬಿದ್ದಾವ್ ಈ ಬಗ್ಗೆ ಅಲ್ಲಿನ ರೋಗಿ ಹಾಗೂ ಸಂಬಂಧಿಗಳ ಮಾತು ಕೇಳ್ರಿ.
ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಅಲ್ಲಿನ ರೋಗಿಗಳ ಪರಿಸ್ಥಿತಿ ಕೇಳಿ, ಈ ದುರ್ನಾತ ಅವ್ಯವಸ್ಥೆ ಸುದ್ಧಿ ತಿಳಿಸಿ ಬಾ ಅಂದಿದ್ದಕ್ಕೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಅಲ್ಲಿಗೆ ಹೋದಾಗ ಈ ಅವ್ಯವಸ್ಥೆ ಬಗ್ಗೆ ಅವ್ರ ಏನು ಹೇಳಿದ್ರೂ ಕೇಳಿ.
ಈ ಎಲ್ಲ ಅವ್ಯವಸ್ಥೆ ಬಗ್ಗೆ ಅಸ್ಪತ್ರೇ ಆಡಳಿತ ಮಂಡಳಿ ಹೇಳೋದು ನಮ್ಗೆ ಸಿಬ್ಬಂದಿ ಕೊರತೆ ಇದೆ ಅಂತ್ಹೇಳಿ ಮಾನ್ಯ ಜಿಲ್ಲಾಧಿಕಾರಿಗಳೇ ನೀವೂ ಕೊನೆ ಬಾರಿ ಕುಂದಗೋಳಕ್ಕ ಬಂದಾಗ ಶಾಸಕಿ ಕುಸುಮಾವತಿ ಶಿವಳ್ಳಿ ನೇತೃತ್ವದಾಗ ಸಿಬ್ಬಂದಿ ಸಮಸ್ಯೆ ಪರಿಹಾರ ಹೇಳಿದ್ರಿ ಅದಿನ್ನೂ ಆಗಿಲ್ಲ ದಯವಿಟ್ಟು ಗಮನಿಸ್ರೀ ಪಾಪಾ ಹಳ್ಳಿಗರಿಗೆ ಒಳ್ಳೆ ಸೌಲಭ್ಯ ಕಲ್ಪಿಸಿ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್ ಕುಂದಗೋಳ
Kshetra Samachara
17/09/2021 06:14 pm