ಹುಬ್ಬಳ್ಳಿ - ಕೊರೊನಾ ರೋಗದ ವಿರುದ್ದ ಹೋರಾಟ ಮಾಡುವ ಕೋವಿಡ್ ವ್ಯಾಕ್ಸಿನ್ ಲಾಂಚಿಂಗ್ ಗೆ ಪ್ರತಿಷ್ಟಿತ ಕಿಮ್ಸ್ ಆಸ್ಪತ್ರೆಗೆ ಭರದ ಸಿದ್ದತೆ ನಡೆದಿದೆ.
ವ್ಯಾಕ್ಸಿನ್ ಉದ್ಘಾಟನೆಗೆ ಕೇಂದ್ರ ಸರ್ಕಾರದಿಂದ ಕಿಮ್ಸ್ ಆಸ್ಪತ್ರೆ ಆಯ್ಕೆ ಮಾಡಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಲಿದ್ದಾರೆ.
ಬೆಂಗಳೂರು ಹಾಗೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿದ್ದು ಹುಬ್ಬಳ್ಳಿಯ ಪ್ರತಿಷ್ಠಿತ ಕಿಮ್ಸ್ ಆಸ್ಪತ್ರೆಯಲ್ಲಿ ಸಿದ್ದತೆ ಭರದಿಂದ ಸಾಗಿದೆ.
ಕಿಮ್ಸ್ ಆಸ್ಪತ್ರೆಯ ವೈದರು ಕೊರೊನಾ ವಿರುದ್ದ ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿಯೇ ಮೊದಲ ಯಶಸ್ವಿ ಪ್ಲಾಸ್ಮಾ ಥೆರಪಿಯನ್ನು ಕಿಮ್ಸ್ ಸಿಬ್ಬಂದಿ ನಡೆಸಿತ್ತು. ಇದೆಲ್ಲವನ್ನು ಪರಿಗಣಿಸಿದ ಕೇಂದ್ರ ಸರ್ಕಾರ ವ್ಯಾಕ್ಸಿನ್ ಲಾಂಚಿಂಗ್ ಗೆ ಕಿಮ್ಸ್ ಆಸ್ಪತ್ರೆಯನ್ನು ಆಯ್ಕೆ ಮಾಡಿದ್ದು ವೈದ್ಯರ ಉತ್ಸಾಹವನ್ನು ಹೆಚ್ವಿಸಿದೆ.
Kshetra Samachara
13/01/2021 08:50 pm